Publish Date: Sun, 14 May 2017 (17:56 IST)
Updated Date: Sun, 14 May 2017 (18:02 IST)
ಹರ್ಯಾಣದಲ್ಲಿ 23 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿ ಮರ್ಮಾಂಗ ಛಿದ್ರಗೊಳಿಸಿದ ಆಘಾತಕಾರಿ ಸುದ್ದಿ ಬೆನ್ನಲ್ಲೇ ಮತ್ತೊಂದು ನಾಗರೀಕ ಸಮಾಜ ತಲೆತಗ್ಗಿಸುವಂಥಾ ಘಟನೆ ರೋಹ್ಟಕ್`ನಲ್ಲಿ ನಡೆದಿದೆ.
ಮಲತಂದೆಯೇ 10 ವರ್ಷ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಬಾಲಕಿ 5 ತಿಂಗಳ ಗರ್ಭಿಣಿಯಾಗಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ, ಬಾಲಕಿಯ ಸ್ಥಿತಿ ತೀರಾ ಗಂಭೀರವಾಗಿದೆ. ಬಿಹಾರದಿಂದ ವಲಸೆ ಬಂದ ದಿನಗೂಲಿ ಮಹಿಳೆಯ ಪುತ್ರಿಯಾಗಿದ್ದು, ವೈದ್ಯರನ್ನ ಸಂಪರ್ಕಿಸಿದಾಗ ಗರ್ಭವಾದ ಸತ್ಯ ಹೊರಬಿದ್ದಿದೆ. ಮಲತಂದೆಯೇ ತನ್ನ ಮೇಲೆ ಅತ್ಯಾಚಾರ ನಡೆಸಿದ್ದು, ಯಾರಿಗೂ ಹೇಳದಂತೆ ಬೆದರಿಸಿದ್ದನೆಂದು ಬಾಲಕಿ ಹೇಳಿಕೊಂಡಿದ್ದಾಳೆ.
ಬಾಲಕಿಯನ್ನ ಮಹಿಳಾ ಪೊಲೀಸ್ ಠನೆಗೆ ಕರೆದೊಯ್ದು ದೂರು ದಾಖಲಿಸಲಗಿದ್ದು, ನಾಳೆ ಮೆಡಿಕಲ್ ಬೋರ್ಡ್ ಸಭೆಯಲ್ಲಿ ಬಾಲಕಿಯ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತೆ. ಕಾಮುಕ ತಂದೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ