Publish Date: Thu, 30 Jul 2020 (23:19 IST)
Updated Date: Thu, 30 Jul 2020 (23:21 IST)
ರಾಜ್ಯದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುತ್ತಾರೆ ಅನ್ನೋ ಚರ್ಚೆ ಭಾರೀ ಸದ್ದು ಮಾಡುತ್ತಿದೆ.
ಈ ನಡುವೆ ಸಿಎಂ ಬದಲಾವಣೆ ಮಾತು ಕೇವಲ ಊಹಾಪೋಹ. ಇದರಲ್ಲಿ ಸತ್ಯ ಇಲ್ಲ ಅಂತ ಸಚಿವ ಶಿವರಾಮ್ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ ನಾಯಕತ್ವ ತುಂಬಾ ಬಲಿಷ್ಠವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಉತ್ತಮವಾಗಿ ಆಡಳಿತ ನೀಡುತ್ತಿದೆ ಎಂದರು.
ಇನ್ನು, ಸಂಪುಟ ರಚನೆ, ವಿಸ್ತರಣೆ ಕುರಿತು ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.