Select Your Language

Notifications

webdunia
webdunia
webdunia
webdunia

ಧಾರವಾಡದಲ್ಲಿ ಹಿಂದೂ ರುದ್ರಭೂಮಿ ವಕ್ಫ್ ಆಸ್ತಿಯಾಗಿದೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ದಾವಣಗೆರೆ , ಗುರುವಾರ, 5 ಡಿಸೆಂಬರ್ 2024 (15:19 IST)
ದಾವಣಗೆರೆ: ವಕ್ಫ್ ಸಮಸ್ಯೆ, ಭೂಮಿ ಕಬ್ಜಾ ಮಾಡುವುದನ್ನು ಗಮನಿಸಿ ಬಿಜೆಪಿ 3 ತಂಡಗಳಲ್ಲಿ ಪ್ರವಾಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ದಾವಣಗೆರೆಯಲ್ಲಿ ಇಂದು ಸುದ್ದಿಗೋಷ್ಠ್ಟಿಯಲ್ಲಿ ಮಾತನಾಡಿದ ಅವರು, ವಕ್ಫ್ ನೋಟಿಸಿನಿಂದ ತೊಂದರೆಗೆ ಒಳಗಾದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. 3 ತಂಡಗಳು ಸಂಗ್ರಹಿಸಿದ ಮಾಹಿತಿಯನ್ನು ಜಂಟಿ ಸಂಸದೀಯ ಸಮಿತಿ ಮತ್ತು ರಾಜ್ಯ ಸರಕಾರಕ್ಕೆ ಸಲ್ಲಿಸಿ ರೈತರು, ಮಠಮಾನ್ಯಗಳಿಗೆ ಅನ್ಯಾಯ ಆಗದಂತೆ ತಡೆಯುವ ಉದ್ದೇಶ ಪಕ್ಷದ್ದು ಎಂದು ವಿವರಿಸಿದರು.

ಧಾರವಾಡ ಜಿಲ್ಲೆ ಮಿಸ್ರಿಕೋಟೆಯಲ್ಲಿ ಹಿಂದೂ ರುದ್ರಭೂಮಿಯನ್ನು ವಕ್ಫ್ ಆಸ್ತಿ ಎಂದು ತಿಳಿಸಿದ್ದಾರೆ. ಶಾಲೆಗಳು, ಸಹಕಾರ ಸೊಸೈಟಿ ಜಾಗ, ಅಂಬೇಡ್ಕರರ ವಿಗ್ರಹ ಇರುವ ಜಾಗವನ್ನೂ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿದ್ದಾರೆ ಎಂದು ಆಕ್ಷೇಪಿಸಿದರು.

ಹಾವೇರಿ ಜಿಲ್ಲೆಯಲ್ಲೂ ರೈತರ ಅಹವಾಲು ಸ್ವೀಕರಿಸಿದ್ದೇವೆ ಎಂದ ಅವರು ಹರಿಹರ ತಾಲ್ಲೂಕಿನ ಬಾನುವಳ್ಳಿಯಲ್ಲಿ ರುದ್ರಭೂಮಿಗೆ ಕೊಟ್ಟ 4 ಎಕರೆಗೂ ಹೆಚ್ಚು ಜಾಗವನ್ನು ಪಹಣಿಯಲ್ಲಿ ಖಬರಸ್ಥಾನ ಎಂದು ತಿಳಿಸಿದ್ದಾರೆ ಎಂದು ಟೀಕಿಸಿದರು. ದರ್ಗಾ, ಮಸೀದಿ ಜಾಗ ಕಾಪಾಡಲು ವಕ್ಫ್ ಇರುವುದು. ಇಲ್ಲಿ ದರ್ಗಾ, ಮಸೀದಿಯವರು ಪತ್ರ ಬರೆದು ವಕ್ಫ್‍ಗೆ ಸೇರಿದೆ ಎಂದು ತಿಳಿಸಿದೊಡನೆ ಅದನ್ನು ವಕ್ಫ್ ಆಸ್ತಿ ಎಂದು ಕಾಲಂ 11ರಲ್ಲಿ ಬರೆಯಲಾಗುತ್ತಿದೆ ಎಂದು ಆರೋಪಿಸಿದರು.

ಸಿಎಂ ಆದೇಶದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಬರಸ್ಥಾನ, ಮಸೀದಿ ಜಾಗಮ ರೈತರು, ಮಠಮಾನ್ಯಗಳ ಜಾಗ ವಕ್ಫ್ ಆಗಿದ್ದರೆ ಕಾಂಪೌಂಡ್ ಹಾಕಲು ಜಿಲ್ಲಾ ಅದಾಲತ್ ಮಾಡುತ್ತಿದ್ದಾರೆ ಎಂದು ಅವರು ಖಂಡಿಸಿದರು. ವಕ್ಫ್ ಹೆಸರಿನಲ್ಲಿ ರೈತರ, ಮಠಗಳ ಭೂಮಿ ಕಬಳಿಸುವ ನೀತಿಯನ್ನು ತೀವ್ರವಾಗಿ ಖಂಡಿಸಿದರು.
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಫೆಂಗಲ್‌ ಚಂಡಮಾರುತ ಪ್ರಭಾವ ತಗ್ಗಿದರೂ ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ