Select Your Language

Notifications

webdunia
webdunia
webdunia
webdunia

ಓಲೈಕೆಯಿಂದ ಜನರಿಗೆ ತೊಂದರೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಬುಧವಾರ, 10 ಸೆಪ್ಟಂಬರ್ 2025 (14:46 IST)
ಬೆಂಗಳೂರು: ಮುಖ್ಯಮಂತ್ರಿಗಳು ಸರ್ವರನ್ನೂ ಜೊತೆಯಾಗಿ ಒಯ್ಯುವ ಕಾರ್ಯ ಮಾಡುತ್ತಿಲ್ಲ. ಗಣೇಶ ವಿಸರ್ಜನೆ ವೇಳೆ ಆಗುತ್ತಿರುವ ಅಹಿತಕರ ಘಟನೆಗಳಿಗೆ ಸರಕಾರವೇ ಹೊಣೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
 
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರಕಾರ ಒಂದು ಕಡೆ ವಾಲಿದ್ದರಿಂದ ಇವತ್ತು ಈ ಪರಿಸ್ಥಿತಿ ಬರುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸರಕಾರ ಹೀಗೆ ನಡೆದುಕೊಂಡರೆ ಸರಿಯೇ ಎಂದು ಕೇಳಿದರು.
 
ಮೊನ್ನೆ ಗಣೇಶ ವಿಸರ್ಜನೆ ಸಮಯದಲ್ಲಿ ಅಚಾತುರ್ಯದ ಘಟನೆಗಳು ನಡೆದಿವೆ. ಇದು ಕಾಂಗ್ರೆಸ್ ತನ್ನ ಮತಬ್ಯಾಂಕನ್ನು ಭದ್ರ ಪಡಿಸಿಕೊಳ್ಳಲು ಕೆಲವು ರೀತಿಯ ಓಲೈಕೆಗಳನ್ನು ಮಾಡಿದ್ದರಿಂದ ಇಡೀ ರಾಜ್ಯದಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
 
ಗಣಪತಿ ವಿಸರ್ಜನೆಗೆ ನೀವು ಅವಕಾಶವನ್ನೂ ಕೊಡುತ್ತಿಲ್ಲ. ಚಿತ್ರದುರ್ಗದಲ್ಲಿ ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ ಎಂದು ಎಸ್ಪಿ ಆದೇಶ ಹೊರಡಿಸಿದ್ದಾರೆ. ನಮ್ಮೂರಿನಲ್ಲಿ ನಮಗೆ ನೀವು ಅನುಮತಿ ಕೊಡಬೇಕೇ ಎಂದು ಕೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜನರಲ್ಲಿ ಕೋಮುಭಾವನೆ ಕೆರಳಿಸಿ, ಬೆಂಕಿ ಹಚ್ಚುವುದೇ ಬಿಜೆಪಿಯ ಕೆಲಸ: ಶಿವಕುಮಾರ್‌ ವಾಗ್ದಾಳಿ