Select Your Language

Notifications

webdunia
webdunia
webdunia
Sunday, 13 April 2025
webdunia

ವಿನಯ್ ಸೋಮಯ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಶುಕ್ರವಾರ, 4 ಏಪ್ರಿಲ್ 2025 (15:34 IST)
ಬೆಂಗಳೂರು: ‘ವಿನಯ್ ಸೋಮಯ್ಯ ರವರ ಸಾವಿನ ಪ್ರಕರಣದಲ್ಲಿ ಎಸ್.ಪಿ. ನೇರ ಹೊಣೆ ಎಂಬುದು ಗೊತ್ತಾಗಿದೆ. ಎಸ್‍ಪಿಯವರನ್ನು ಅಮಾನತು ಮಾಡಬೇಕು. ಪ್ರಕರಣದಲ್ಲಿ ಒಳಗೊಂಡ ಆರೋಪಿತರಾದ ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಆರೋಪಿತ ತನ್ನೀರ್ ಮೈನಾ ಅವರನ್ನು ಎಫ್‍ಐಆರ್‍ನಲ್ಲಿ ಸೇರಿಸಿ ತನಿಖೆ ನಡೆಸಬೇಕು. ಅವರನ್ನು ಬಂಧಿಸಬೇಕು’ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ರವರು ಅಕಾಲಿಕ  ನಿಧನರಾಗಿದ್ದು, ಅವರಿಗೆ ಅಂತಿಮ ನಮನ ಸಲ್ಲಿಸಲು ಬೆಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಲ್ಲದೇ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ‘ಆತ್ಮಹತ್ಯೆ ಹಿಂದೆ ಮಾನ್ಯ ಶಾಸಕ ಪೊನ್ನಣ್ಣನವರು ಇದ್ದಾರೆ ಎಂದು ವಿನಯ್ ಸೋಮಯ್ಯ ಡೆತ್ ನೋಟಿನಲ್ಲಿ ಬರೆದುಕೊಂಡಿದ್ದಾರೆ’ ಎಂದು ತಿಳಿಸಿದರು. ‘ತಡಮಾಡದೇ ಈ ಕೇಸನ್ನು ಸಿಬಿಐಗೆ ಕೊಡಿ’ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

‘ಪ್ರಕರಣದಲ್ಲಿ ಪೊಲೀಸರು ನೇರವಾಗಿ ಭಾಗವಹಿಸಿದ್ದಾರೆ. ಜಾಮೀನು ಪಡೆದರೂ ಯಾಕೆ ಅವರನ್ನು ಹುಡುಕುತ್ತಿದ್ದರು? ಅವರೇನು ರೌಡಿಯೇ?’ ಎಂದು ಕೇಳಿದರು. ‘ಕಾಂಗ್ರೆಸ್ಸಿನ ಅಟ್ಟಹಾಸ ಮೆಟ್ಟಿ ನಿಲ್ಲುವ ಶಕ್ತಿ ನಮಗಿದೆ ಎಂದು ಈ ಸರಕಾರಕ್ಕೆ ಎಚ್ಚರಿಕೆ ನೀಡುವುದಾಗಿ’ ತಿಳಿಸಿದರು. ‘ಯಾವುದೇ ಕಾರಣಕ್ಕೆ ಜೀವತ್ಯಾಗ ಮಾಡಬಾರದು. ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ’ ಎಂದು ತಿಳಿಸಿದರು. 

‘ಇದು ಎರಡು ತಿಂಗಳಿಂದ ನಡೆದ ಘಟನೆ; ಆವತ್ತಿನಿಂದ ವಿನಯ್ ಸೋಮಯ್ಯರಿಗೆ ಕಿರುಕುಳ ಕೊಟ್ಟಿದ್ದಾರೆ. ತೊಂದರೆ ಆಗಿದೆ. ಅಪಮಾನ ಆಗಿದೆ. ಸಹಿಸಿಕೊಳ್ಳಲಾಗದ ಪರಿಸ್ಥಿತಿ ಉದ್ಭವವಾಗಿದೆ. ಅವರಿಗೆ ತೊಂದರೆ ಕೊಟ್ಟ ಕಾರಣ ಕೋರ್ಟಿಗೆ ಹೋಗಿದ್ದರು. ಅವರು ತಮ್ಮ ಡೆತ್‍ನೋಟಿನಲ್ಲಿ ಇಷ್ಟು ಕಾಲ ನನ್ನ ತಾಯಿಯನ್ನೂ ನೋಡಲು ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಮಂಥರ್ ಗೌಡ ಎಂಬ ಇನ್ನೊಬ್ಬ ಶಾಸಕರೂ ನನಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ. ಸರಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಸ್ವಚ್ಛತೆಯೇ ಇಲ್ಲ ಎಂದು ಸೋಷಿಯಲ್ ಮೀಡಿಯ ಗುಂಪಿನಲ್ಲಿ ಯಾರೋ ಹಾಕಿದ್ದನ್ನು ವಿನಯ್ ಮರುಪೋಸ್ಟ್ ಮಾಡಿದ್ದರು. ಈ ಗ್ರೂಪಿನಲ್ಲಿ ನಾಲ್ಕೈದು ಜನ ಆಡ್ಮಿನ್‍ಗಳಿದ್ದಾರೆ. ಈತನು ಕೂಡ ಒಬ್ಬ ಆಡ್ಮಿನ್. ರೌಡಿಶೀಟರ್ ಮಾಡಲು ಪೊಲೀಸರು ಹೊರಟ ವಿಚಾರವೂ ಡೆತ್ ನೋಟಿನಲ್ಲಿದೆ’ ಎಂದರು.
 
‘ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ಇದೆ. ಕಾಂಗ್ರೆಸ್ ಶಾಸಕರ ಮತ್ತು ನಾಯಕರ ಅಧಿಕಾರದ ಅಟ್ಟಹಾಸ ಬಹಳ ಹೆಚ್ಚಾಗಿದೆ. ಯಾದಗಿರಿಯಲ್ಲಿ ಎಸ್‍ಐ ಪರಶುರಾಂ ಆತ್ಮಹತ್ಯೆ ಮಾಡಿಕೊಂಡಾಗ ಅಲ್ಲಿ ಶಾಸಕ ಚೆನ್ನಾರೆಡ್ಡಿ ಹೆಸರು ಬರೆಯಲಾಗಿತ್ತು. ಜಾತಿ ನಿಂದನೆ, ಹಣ ಕೇಳಿದ ಆರೋಪವಿತ್ತು’ ಎಂದು ವಿವರಿಸಿದರು. ‘ಅಲ್ಲಿ ಶಾಸಕರನ್ನು ಬಂಧಿಸಿಲ್ಲ; ಗುಲ್ಬರ್ಗದಲ್ಲಿ ಸಚಿನ್ ಪಾಂಚಾಳ್ ಡೆತ್ ನೋಟಿನಲ್ಲಿ ಪ್ರಿಯಾಂಕ್ ಖರ್ಗೆಯವರ ಹೆಸರು ಬರೆದಿತ್ತು. ಅವರ ಸಹಚರರ ಹೆಸರಿದ್ದರೂ ಕೇಸ್ ಏನಾಗಿದೆ’ ಎಂದು ಪ್ರಶ್ನಿಸಿದರು.
 
‘ಬೆಳಗಾವಿಯ ತಹಸೀಲ್ದಾರ್ ಕಚೇರಿಯಲ್ಲಿ ರುದ್ರಣ್ಣ ಯಡವಣ್ಣ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಪಿ.ಎ. ಹೆಸರು ಹೇಳಿ ತೀರಿಕೊಂಡರು. ಏನಾದ್ರೂ ಕ್ರಮ ಆಯ್ತ? ಇಲ್ಲ’ ಎಂದು ತಿಳಿಸಿದರು. ‘ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್, ಡೆತ್ ನೋಟಿನಲ್ಲಿ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ದದ್ದಲ್ ಅವರ ಹೆಸರು ಬರೆದಿಟ್ಟಿದ್ದರು. ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಈಗ ವಿನಯ್ ಸೋಮಯ್ಯ ರವರ ಪ್ರಕರಣ ಬಂದಿದೆ’ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಲಾರಿ ಮುಷ್ಕರಕ್ಕೆ ಸಿದ್ಧತೆ, ಮುಂದಿನ ವಾರದಲ್ಲಿ ಮತ್ತೆ ಬೆಲೆ ಏರಿಕೆಗೆ ಸಿದ್ಧರಾಗಿ