Webdunia - Bharat's app for daily news and videos

Install App

ಚಾಲಾಕಿವೋರ್ವ 1.9 ಲಕ್ಷ ರೂ. ಮೌಲ್ಯದ 2 ಲ್ಯಾಪ್‌ಟಾಪ್ ಕಳವು ಮಾಡಿ ಪರಾರಿ

Webdunia
ಮಂಗಳವಾರ, 5 ಅಕ್ಟೋಬರ್ 2021 (21:10 IST)
ಬೆಂಗಳೂರು: ಪಿಜಿಗೆ ಹೊಸದಾಗಿ ಬಂದಿರುವುದಾಗಿ ಹೇಳಿ ರೂಂನ ಕೀ ಪಡೆದ ಚಾಲಾಕಿವೋರ್ವ 1.9 ಲಕ್ಷ ರೂ. ಮೌಲ್ಯದ 2 ಲ್ಯಾಪ್‌ಟಾಪ್ ಕಳವು ಮಾಡಿ ಪರಾರಿಯಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಬಿ.ಟಿ.ಎಂ ಲೇಔಟ್ 1ನೇ ಹಂತದಲ್ಲಿರುವ ಭವಿಷ್ಯ ಪಿಜಿಯಲ್ಲಿ ಸ್ನೇಹಿತ ರಾಜ್‌ಶಾ ಜೊತೆಗೆ ಮಕರಂದ್ ಎಂಬುವರು ವಾಸಿಸುತ್ತಿದ್ದರು. ಸೆ. 29ರ ಮಧ್ಯಾಹ್ನ 1 ಗಂಟೆಯಲ್ಲಿ ರೂಂಗೆ ಬಂದ ಅಪರಿಚಿತ ವ್ಯಕ್ತಿ ತಾನು ಹೊಸದಾಗಿ ಇದೇ ಪಿಜಿಗೆ ಸೇರಿದ್ದೇನೆ. ಮಾಲೀಕರು ಈ ರೂಂನಲ್ಲಿ ಇರಲು ಹೇಳಿದ್ದಾರೆ. ಕೀ ಕೊಟ್ಟರೆ ಲಗೇಜ್ ತರುತ್ತೇನೆ ಎಂದು ಹೇಳಿ ಮಕರಂದ್ ಬಳಿ ರೂಂನ ಕೀ ಪಡೆದಿದ್ದ. ಮಕರಂದ್ ಹಾಗೂ ರಾಜ್‌ಶಾ ಹೊರಹೋಗಿ ಸ್ವಲ್ಪ ಹೊತ್ತಿನ ಬಳಿಕ ಹಿಂದಿರುಗಿದಾಗ ರೂಂನಲ್ಲಿದ್ದ ಲ್ಯಾಪ್‌ಟಾಪ್​ಗಳು ಇರಲಿಲ್ಲ. ಜತೆಗೆ ಅಪರಿಚಿತ ವ್ಯಕ್ತಿಯೂ ಇರಲಿಲ್ಲ. ಈ ಬಗ್ಗೆ ಪಿಜಿ ಮಾಲೀಕರನ್ನು ವಿಚಾರಿಸಿದಾಗ ಯಾರೂ ಹೊಸದಾಗಿ ಪಿಜಿಗೆ ಸೇರಿಲ್ಲ ಎಂದಿದ್ದಾರೆ. ಆಗ ಕಳ್ಳನ ಕರಾಮತ್ತು ಬೆಳಕಿಗೆ ಬಂದಿದೆ. ಬೆಳಗಾವಿ ಮೂಲದ ಮಕರಂದ್ ಎಂಬುವರು ಈ ಬಗ್ಗೆ ದೂರು ನೀಡಿದ್ದಾರೆ. ಆರೋಪಿಯ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಕ್ಷಣೆ ನೀಡಬೇಕಿದ್ದ ಕೈಯಿಂದಲೇ 10ರ ಬಾಲಕಿ ಮೇಲೆ ರೇಪ್ ಆಂಡ್ ಮರ್ಡರ್‌, ಕಾನ್ಸ್‌ಟೇಬಲ್ ಅರೆಸ್ಟ್‌

ಬಟ್ಟೆ ನೆನೆಯಲು ಹಾಕಿದ್ದ ಬಕೆಟ್‌ಗೆ ಬಿದ್ದು 8 ತಿಂಗಳ ಕಂದಮ್ಮ ಸಾವು

ಪ್ರಧಾನಿ ಮೋದಿಗೆ ಬೈದಿದ್ದ ವೈರಲ್ ಹುಡುಗಿ ನಿಶೂ ಮನೆ ಖಾಲಿ ಮಾಡಿಸಿದ ಮಾಲಿಕ Video

ಜಂತರ್ ಮಂತರ್‌ನಲ್ಲಿ ಭಾಗಿಯಾದ ಪ್ರತಿಭಟನಕಾರರಿಗೆ ಬಿಗ್ ರಿಲೀಫ್

Karnataka Weather: ಭಾರೀ ಮಳೆ, ಇದೇ 31ರ ವರೆಗೆ ರಾಜ್ಯದ ಈ 15ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್‌

ಮುಂದಿನ ಸುದ್ದಿ
Show comments