Select Your Language

Notifications

webdunia
webdunia
webdunia
Saturday, 12 April 2025
webdunia

ಮಾತಿಗೆ ಎಳೆದು 2 ಲಕ್ಷ ಕಳ್ಳತನ ಮಾಡಿದ ಚಾಲಾಕಿ ಕಳ್ಳರು

ಅಂಚೆ ಸಹಾಯಕಿ
ಹಾಸನ , ಭಾನುವಾರ, 30 ಜೂನ್ 2019 (17:56 IST)
ಮಾತಿನ ಎಳೆದು ಈ ನಡುವೆ ಗಮನ ಬೇರೆ ಕಡೆ ಸೆಳೆದು 2 ಲಕ್ಷ ರೂಪಾಯಿ ಕಳ್ಳತನ ಮಾಡಿ ತಮ್ಮ ಕೈಚಳಕವನ್ನು ಕಳ್ಳರು ತೋರಿರುವ ಘಟನೆ ನಡೆದಿದೆ.

ಅಂಚೆ ಸಹಾಯಕಿ ಗಮನ ಬೇರೆಡೆ ಸೆಳೆದು ಎರಡು ಲಕ್ಷ ನಗದು ಕಳ್ಳತನ ಮಾಡಲಾಗಿದೆ. ಪಾಸ್ ಬುಕ್ ಎಂಟ್ರಿ ಮಾಡಿಸುವ ನೆಪದಲ್ಲಿ ಬಂದ ತಂಡದಿಂದ ಕೃತ್ಯ ನಡೆದಿದೆ.

ಹಾಸನದ ಪ್ರಧಾನ ಅಂಚೆ ಕಛೇರಿಯಲ್ಲಿ ಘಟನೆ ನಡೆದಿದೆ. ಕ್ಯಾಶ್ ಕೌಂಟರ್ ನಲ್ಲಿದ್ದ ಅಂಚೆ ಸಹಾಯಕಿ ಕಾಂಚನಾ ಅವರ ಡ್ರಾಯರ್ ನಿಂದ ನಗದು ಎಗರಿಸಿದ್ದಾರೆ ಖದೀಮರು. ಹಣ ಎಗರಿಸಿ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮದ್ಯಾಹ್ನ 12 ಗಂಟೆ ಸುಮಾರಿಗೆ ನಡೆದ ಘಟನೆ ಇದಾಗಿದೆ. ಅಂಚೆ ಕಛೇರಿಗೆ ಬಂದ 10 ಜನರಿಂದ‌ ಕೃತ್ಯ ಇದಾಗಿದೆ ಎಂದು ಆರೋಪ ಕೇಳಿಬಂದಿದೆ.

ಕ್ಯಾಶ್ ಕೌಂಟರ್ ಬಳಿ ಬಂದ‌ ಮೂವರು, ಕೌಂಟರ್ ಮುಂಭಾಗ ಮಾತನಾಡಿಸುತ್ತಾ ನಿಂತಿದ್ದರು ಇನ್ನುಳಿದ ಜನರು.
ಮಾತಿನ ನಡುವೆ ಗಮನ ಬೇರೆಡೆ ಸೆಳೆದು ಕೃತ್ಯ ಎಸಗಿದ್ದಾರೆ.

ಜನಸಂದಣಿ‌ಯ ಲಾಭ ಪಡೆದು ನಗದು ಎಗರಿಸಿದ್ದಾರೆ ಚೋರರು. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಾಗಲ್ ಪ್ರೇಮಿ ಚೂರಿ ಇರಿತ ಪ್ರಕರಣ; ಆಸ್ಪತ್ರೆಗೆ ಭೇಟಿ ನೀಡಿದ ಸಚಿವ