Select Your Language

Notifications

webdunia
webdunia
webdunia
webdunia

ಕಾರ್ ಗ್ಲಾಸ್ ಒಡೆದು ಹಾಡ ಹಗಲೇ ಅಪಾರ ನಗದು ದರೋಡೆ

ಕಾರು
ಹಾಡ ಹಗಲಲ್ಲೇ ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ಅಪಹರಿಸಿರುವ ಘಟನೆ ನಡೆದಿದೆ.

ಕಲಬುರಗಿ ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಈ ಘಟನೆ ನಡೆದಿದೆ. ಹರಿಪ್ರಸಾದ್ ಎಂಬುವರು 1 ಲಕ್ಷ ನಗದನ್ನು ಕಾರಿನಲ್ಲಿಟ್ಟು ಕಳೆದುಕೊಂಡವರು.

ಬ್ಯಾಂಕಿನಲ್ಲಿ ಠೇವಣಿ ಮಾಡಲು ಹಣ ತಂದಿದ್ದ ಹರಿಪ್ರಸಾದ್ ಮಾರ್ಗದ ನಡುವೆ ಮಿನಿವಿಧಾನಸೌಧ ದಲ್ಲಿ ವಯಕ್ತಿಕ ಕೆಲಸಕ್ಕಾಗಿ ಬಂದಿದ್ದರು.

ಆವರಣದಲ್ಲಿ ಕಾರು ನಿಲ್ಲಿಸಿ ಹೋಗಿದ್ದರು. ಹೊಂಚು ಹಾಕಿದ್ದ ಖದೀಮರು ಕಾರಿನೊಳಗಿದ್ದ ಹಣದ ಬ್ಯಾಗ್ ನೊಂದಿಗೆ ಪರಾರಿಯಾಗಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಅಡಳಿತ ಹೇರಿಕೆ?