Publish Date: Sat, 08 Jun 2019 (09:34 IST)
Updated Date: Sat, 08 Jun 2019 (09:37 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಮೂಲಕ ದೇಶಕ್ಕೆ ಹೆಸರು ತರುತ್ತಿದ್ದರೆ ಇತ್ತ ಅವರ ಸಹಾಯಕರು ಮಾಡಿದ ಕೆಲಸದಿಂದ ದಂಡನೆಗೊಳಗಾಗಿದ್ದಾರೆ.
ಕೊಹ್ಲಿಯ ಗುರುಗ್ರಾಮ್ ನಲ್ಲಿರುವ ನಿವಾಸದಲ್ಲಿ ಕಾರುಗಳನ್ನು ಕುಡಿಯುವ ನೀರಿನಿಂದ ತೊಳೆಯಲಾಗುತ್ತಿದೆ ಎಂದು ನಗರ ಪಾಲಿಕೆ ಕೊಹ್ಲಿಗೆ ದಂಡದ ನೋಟಿಸ್ ನೀಡಿದೆ.
ಈ ನಿವಾಸದಲ್ಲಿ ಕೊಹ್ಲಿಯ ಆರೇಳು ದುಬಾರಿ ಕಾರುಗಳು ಇವೆ. ಅವುಗಳನ್ನು ಸಹಾಯಕರು ಕುಡಿಯುವ ನೀರು ಬಳಸಿ ತೊಳೆದು ನೀರು ಪೋಲು ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ. ಕಾರು ತೊಳೆಯಲು ಮತ್ತಿತರ ಕಾರಣಗಳಿಗೆ ಕುಡಿಯುವ ನೀರನ್ನು ಈ ನಿವಾಸದಲ್ಲಿ ಸಹಾಯಕರು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.