ಚಿತ್ರದುರ್ಗದಲ್ಲಿ ಜಾಮೀನು ಕಬಳಿಕೆ

Webdunia
ಶುಕ್ರವಾರ, 27 ಆಗಸ್ಟ್ 2021 (14:32 IST)
ಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿಯ ಇಂಗಳದಾಳು ಗ್ರಾಮ ಪಂಚಾಯಿತಿ ರಿ. ಸರ್ವೇ ನಂಬರ್ 44 ರಲ್ಲಿ 40 ಎಕೆರೆ ಗೋಮಾಳ‌ ಜಮೀನಿದ್ದು,  ಜಿಲ್ಲಾಡಳಿವು ಅಲ್ಲಿ ಜಿಲ್ಲಾಡಳಿತ ಭವನ ಕಟ್ಟಲು  ಸದರಿ ಜಾಗವನ್ನು ಸಮತಟ್ಟು ಮಾಡಲು ಪಿ ಡಬ್ಲ್ಯೂ ಇಲಾಖೆಗೆ ಷರತ್ತು ಬದ್ದ ನಿಬಂಧನೆಗಳೊಂದಿಗೆ  ಆದೇಶ ನೀಡಿತ್ತು. ಆದರೆ ಸದರಿ ಅದೇಶವನ್ನು  ಪಿ ಡಬ್ಲ್ಯೂ ಇಲಾಖೆ ಅಧಿಕಾರಿಗಳು  ಪಿಎನ್ ಸಿ ಕಂಪನಿಯೊಂದಿಗೆ ಶಾಮೀಲಾಗಿ  ಆದೇಶ ಮಾರ್ಪಡಿಸಿದ್ದಾರೆ ಎಂದು ‌ವಕೀಲರಾದ ಪ್ರತಾಪ್ ಜೋಗಿ ಆರೋಪಿಸಿದ್ದಾರೆ.
ಸರ್ಕಾರದ ಆದೇಶದಂತೆ ಜಿಲ್ಲಾಡಳಿತದ ಕಟ್ಟಡವನ್ನು ರೊ.‌ಸರ್ವೆ  ನಂ: 44 ರಲ್ಲಿ 40 ಎಕರೆ ಜಾಗವಿದ್ದು,ಅದರಲ್ಲಿ‌ ಕೇವಲ 10 ಎಕರೆ  ಪ್ರದೇಶದಲ್ಲಿ ಮಾತ್ರ ಜಿಲ್ಲಾಡಳಿತ ಕಟ್ಟಡವನ್ನು ನಿರ್ಮಿಸಲು ಸೂಚಿಸಿದ್ದಾರೆ.  ಆದರೆ ಪಿ ಡಬ್ಲ್ಯೂ ಇಲಾಖೆ ಮತ್ತು ಪಿಎನ್ ಸಿ ಕಂಪನಿಯವರ ಜೊತೆಗೂಡಿ  ಸು‌ಮಾರು 40 ಎಕರೆಯಲ್ಲೂ ಅಕ್ರಮವಾಗಿ  ಕಾಮಗಾರಿಯನ್ನು ನಡೆಸಿದ್ದಾರೆ. ‌ಭಾರೀ ಗಾತ್ರದ ‌ವಾಹನಗಳನ್ನು ಬಳಸಿ ಚಿತ್ರದುರ್ಗ ಮತ್ತು ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಗೆ ಅಲ್ಲಿರುವ ಯೋಗ್ಯವಾದ  ಜಲ್ಲಿ,  ಕಲ್ಲು ಮಣ್ಣನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ. ಇದರಿಂದ ಗ್ರಾಮಸ್ಥರ ಜಮೀನಿನಲ್ಲಿ ರುವ ಬೆಳೆ ಹಾನಿ ಹಾಗೂ ಗ್ರಾಮಸ್ಥರಿಗೂ ಅಪಘಾತವಾಗಿದೆ. ಇದರ ಬಗ್ಗೆ ಕಂಪನಿಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಉಚ್ಚ ನ್ಯಾಯಾಲಯಕ್ಕೆ  ದಾವೆ ಹೂಡಿದ್ದು, ಅರ್ಜಿಯನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿರುವ ಹೈ ಕೋರ್ಟ್ ಜಿಲ್ಲಾಧಿಕಾರಿ ಹಾಗೂ ಗಣಿ‌ಮತ್ತು ಭೂ ವಿಜ್ಞಾನ ಇಲಾಖೆಗೆ ಸ್ಥಳ‌ ಪರಿಶೀಲನೆ ಮಾಡಿ ವರದಿ ನೀಡುವಂತೆ ಆದೇಶ ನೀಡಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದಲ್ಲೂ ಪೆಟ್ರೋಲ್ ಸಿಗ್ತಿಲ್ಲ ಎಂದು ಜನರ ಮುಂದೆ ಪುಂಗಿ ಬಿಟ್ಟ ಪಾಕಿಸ್ತಾನಿ ಉನ್ನತಾಧಿಕಾರಿ Video

ಇರಾನ್, ಅಮೆರಿಕಾ ಯುದ್ಧ ನಿಲ್ಲಿಸಿದ್ದು ನಾವೇ, ನಮ್ಮ ಪ್ರಧಾನಿ ತುಂಬಾ ಸ್ಟ್ರಾಂಗ್ ಎಂದು ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನ

Karnataka Weather: ಅಬ್ಬಾ.. ಇಂದು ಈ ಜಿಲ್ಲೆಗಳಲ್ಲಿ ರಣ ಭೀಕರ ಬಿಸಿಲು

ಇರಾನ್ ಮೇಲೆ ಭೀಕರ ದಾಳಿಗೆ ಬ್ರೇಕ್: ಕಡೇ ಗಳಿಗೆಯಲ್ಲಿ 15 ದಿನಗಳ ಕದನ ವಿರಾಮ

ಅಸ್ಸಾಂ, ಕೇರಳ, ಪುದುಚೇರಿ ಚುನಾವಣೆ: ಮತದಾರರನ್ನು ಒಲಿಸಿಕೊಳ್ಳಲು ನಾಯಕರ ಕೊನೆ ಹಂತದ ಪ್ರಯತ್ನ ಅಂತ್ಯ

ಮುಂದಿನ ಸುದ್ದಿ
Show comments