Select Your Language

Notifications

webdunia
webdunia
webdunia
webdunia

CET ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ, ಈ ವರ್ಷ ಪರೀಕ್ಷೆ ಯಾವಾಗ ಇಲ್ಲಿದೆ ವಿವರ

Students

Krishnaveni K

ಬೆಂಗಳೂರು , ಶುಕ್ರವಾರ, 17 ಜನವರಿ 2025 (08:58 IST)
ಬೆಂಗಳೂರು: 2025 ನೇ ಸಾಲಿನ ಎಂಜಿನಿಯರಿಂಗ್, ಪಶು ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ. ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.

ಏಪ್ರಿಲ್ 16 ಮತ್ತು 17 ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಏ. 16 ರಂದು ಬೆಳಿಗ್ಗೆ 10.30 ಕ್ಕೆ ಭೌತಶಾಸ್ತ್ರ, ಮಧ್ಯಾಹ್ನ 2.30 ಕ್ಕೆ ರಸಾಯನ ಶಾಸ್ತ್ರ, ಏ.17 ಕ್ಕೆ ಬೆಳಿಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ. ಏ.18 ರಂದು ಗಡಿನಾಡ ಕನ್ನಡಿಗರಿಗೆ ಪರೀಕ್ಷೆ ನಡೆಯುವುದು.

ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜನವರಿ 23 ರಿಂದ ಫೆಬ್ರವರಿ 21 ರವರೆಗೆ ಅವಕಾಶ ನೀಡಲಾಗಿದೆ. ಕೆಇಎ ವೆಬ್ ಸೈಟ್ ನಲ್ಲಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ನೀಡಿ ಲಾಗಿನ್ ಆಗಿ ಒಟಿಪಿ ಪ್ರಮಾಣೀಕರಿಸಿ. ನಂತರ ಅರ್ಜಿ ಭರ್ತಿ ಮಾಡಬೇಕಾಗುತ್ತದೆ. ಹೀಗಾಗಿ ಅವರದೇ ಮೊಬೈಲ್ ಸಂಖ್ಯೆಯನ್ನು ನೀಡಿ. ಒಂದು ಮೊಬೈಲ್ ಸಂಖ್ಯೆಯಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರಲಿದೆ.

ಆನ್ ಲೈನ್ ನಲ್ಲಿ ನೀಡಲಾಗುವ ಅರ್ಜಿಯಲ್ಲಿ ನಮೂದಿಸುವ ಜಾತಿ/ಆದಾಯ ಪ್ರಮಾಣ ಪತ್ರ ಮತ್ತು 371 (ಜೆ) ಆರ್ ಡಿ ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಯು ಮೀಸಲಾತಿ ಅಡಿಯಲ್ಲಿ ಬರುತ್ತಾರೆಯೇ ಎಂದು ವಿವರಣೆ ಪಡೆಯಲಾಗುತ್ತದೆ.

ಸ್ಯಾಟ್ ಸಂಖ್ಯೆಯ ಆಧಾರದ ಮೇಲೆ ವಿದ್ಯಾರ್ಥಿಯ ವ್ಯಾಸಂಗದ ವಿವರಗಳನ್ನು ವೆಬ್ ಸರ್ವಿಸ್ ಮೂಲಕ ಪಡೆಯಲಾಗುವುದು. ನಂತರ ಅಭ್ಯರ್ಥಿಗಳಿಗೆ ಕ್ಲೈಮ್ ಸರ್ಟಿಫಿಕೇಟ್ ಡೌನ್ ಲೋಡ್ ಮಾಡಲು ಅವಕಾಶ ನೀಡಲಾಗುತ್ತದೆ.

ಕ್ಲೈಮ್ ಸರ್ಟಿಫಿಕೇಟ್ ನಲ್ಲಿ ಸಕ್ಸಸ್ ಫುಲಿ ವೇರಿಫೈಡ್ ಎಂದು ಬಂದರೆ ಆ ಅಭ್ಯರ್ಥಿಗಳಿಗೆ ಮುಂದೆ ದಾಖಲೆ ಪರಿಶೀಲನೆಗೆ ಕಚೇರಿಗಳಿಗೆ ಅಲೆದಾಡಬೇಕಾಗುವುದಿಲ್ಲ. ಸಿಇಟಿ ಫಲಿತಾಂಶದ ನಂತರ ವೆರಿಫಿಕೇಷನ್ ಸ್ಲಿಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ನಾಟ್ ವೆರಿಫೈಡ್ ಎಂದು ಬಂದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಕಾಲೇಜಿಗೆ ಭರ್ತಿ ಮಾಡಿದ ಅರ್ಜಿ ಮತ್ತು ಕ್ಲೈಮ್ ಮಾಡಿರುವ ಎಲ್ಲಾ ಮೂಲ ದಾಖಲೆಗಳನ್ನು ಪ್ರಾಂಶುಪಾಲರಿಗೆ ತೋರಿಸಿ ಒಂದು ಸೆಟ್ ಪ್ರತಿಗಳನ್ನು ಕ್ಲೈಮ್ ಸರ್ಟಿಫಿಕೇಟ್ ನೊಂದಿಗೆ ಸಲ್ಲಿಸಬೇಕು. ಈ ಬಾರಿ ವಿದ್ಯಾರ್ಥಿಗಳು ಯಾವುದೇ ದಾಖಲೆಗಳನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುವ ಅಗತ್ಯವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸೈಫ್ ಅಲಿ ಖಾನ್ ಕೇಸ್ ಗೆ ಕನ್ನಡಿಗ ಎನ್ ಕೌಂಟರ್ ದಯಾ ನಾಯಕ್ ಎಂಟ್ರಿ: ಶಂಕಿತನ ಫೋಟೋ ರಿವೀಲ್