Publish Date: Sun, 28 Jun 2026 (11:36 IST)
Updated Date: Sun, 28 Jun 2026 (11:54 IST)
ತುಮಕೂರು: ಅವ್ನು ಏನ್ರೀ ಮಾತಾಡ್ತಾನೆ ಅವ್ನ ಮನೆ ಕಾಯೋಗ. ಸಣ್ಣ ಘಟನೆಯನ್ನ, ನಾನು ಒಬಿಸಿ, ಆ ಜಾತಿ, ಈ ಜಾತಿ ಎಂದು ಹೇಳಿದ್ರೆ ದೇಶ ಉಳಿತಾದ.ಭಾಷೆ ಎಲ್ಲಕ್ಕಿಂತೂ ಕೆಟ್ಟದು. ಆ ಭಾಷೆಯನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗುವುದು ಪ್ರದೀಪ್ ಈಶ್ವರ್‌ಗೆ ಒಳ್ಳೆಯದಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಆಕ್ರೋಶ ಹೊರಹಾಕಿದರು.
ಎಚ್‌ಡಿ ಕುಮಾರಸ್ವಾಮಿ ವಿರುದ್ಧದ ಪ್ರದೀಪ್ ಈಶ್ವರ್ ಹೇಳಿಕೆ ಸಂಬಂಧ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಒಂದು ಕೋಚಿಂಗ್ ಸಂಸ್ಥೆಯನ್ನು ಮುನ್ನಡೆಸಿಕೊಂಡು, ನಿನ್ನಂತಹ ಜನಪ್ರತತಿನಿಧಗಳು ಈ ರೀತಿ ನಡೆದುಕೊಂಡು, ಮಕ್ಕಳಿಗೆ ಏನು ಸಂದೇಶ ನೀಡುತ್ತಿದ್ದೀರಿ ಎಂದು ಗರಂ ಆದರು.
ಇಂತಹ ಹುಡುಗಾಡಿಕೆಯನ್ನು ಬಿಟ್ಟು, ಕೊಡುಗೆಯನ್ನು ಕೊಟ್ಟಿರುವ ಕುಮಾರಸ್ವಾಮಿ ಅಂತಹ ವ್ಯಕ್ತಿಗಳ ಜತೆ ಸಂಘರ್ಷ ಬಿಟ್ಟು ಅವರಿಂದ ಕಲಿತುಕೊಳ್ಳಲು ಹೋಗಿ ಎಂದು ಹೇಳಿದರು.
ರಾಜಕಾರಣ ಮುಳ್ಳಿನ ಹಾಸಿಗೆ. ಭಾಷೆ ಎಲ್ಲಕ್ಕಿಂತೂ ಕೆಟ್ಟದು. ಆ ಭಾಷೆಯನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದಲ್ಲ. ಪ್ರದೀಪ್ ಈಶ್ವರ್ ಎದುರಿಗೆ ಸಿಕ್ಕರೆ ಬುದ್ಧಿ ಹೇಳುತ್ತೇನೆ ಎಂದು ಹೇಳಿದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ