Select Your Language

Notifications

webdunia
webdunia
webdunia
webdunia

ದ್ವೇಷದ ರಾಜಕಾರಣ ಮಾಡ್ತಿದೆ ಕೇಂದ್ರ ಸರ್ಕಾರ- ಸಿಎಂ

Central government is doing politics of hatred
bangalore , ಬುಧವಾರ, 28 ಜೂನ್ 2023 (20:34 IST)
ನಾವು ದುಡ್ಡು ಕೊಟ್ಟರು ಅಕ್ಕಿ ಕೊಡ್ತಿಲ್ಲ ಕೇಂದ್ರ ಸರ್ಕಾರ.ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ..ಆದ್ರೂ ಅಕ್ಕಿ ಕೊಡ್ತಿಲ್ಲ.ದ್ವೇಷದ ರಾಜಕಾರಣ ಮಾಡ್ತಿದೆ ಕೇಂದ್ರ ಸರ್ಕಾರ.ಅಕ್ಕಿಯನ್ನು ಖಾಸಗಿಯವರಿಗೆ ಮಾರಾಟ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ
 
ಆದ್ರೆ ರಾಜ್ಯಗಳಿಗೆ ಅಕ್ಕಿ ಕೊಡ್ತಿಲ್ಲ.ಅಕ್ಕಿ ಇಟ್ಟಿಕೊಂಡು ನಮ್ಗೆ ಕೊಡ್ತಿಲ್ಲ.ಇದೊಂದು ಬಡವರ ಕಾರ್ಯಕ್ರಮ.ಬಿಜೆಪಿ ನಾಯಕರು ಕೇಂದ್ರದಿಂದ ನಮ್ಗೆ ಅಕ್ಕಿ ಕೊಡಿಸಬೇಕು ಅಲ್ವಾ...ಇದೊಂದು ಬಡವರ ಕಾರ್ಯಕ್ರಮ ತಾನೇ.ನಾನು ಅಮೀತ್ ಶಾ ಭೇಟಿ ಮಾಡಿದ್ದೆ.ಅಕ್ಕಿ ವಿಚಾರವಾಗಿ ಭೇಟಿ ಮಾಡಿದೆ.ಇನ್ನೂ ಅಕ್ಕಿ ದಾಸ್ತಾನು ಇಟ್ಕೊಂಡು ಕೊಡ್ತೀವಿ ಅಂತ ಕೇಂದ್ರ ಸರ್ಕಾರ ಹೇಳಿದ್ರು.14 ನೇ ತಾರೀಖು ಅಕ್ಕಿ ಇಲ್ಲ ಅಂತ ಪ್ರತ್ರ ಬರೆದಿದ್ದಾರೆ.ದುಡ್ಡು ಕೊಟ್ಟರು ಅಕ್ಕಿ ಕೊಡಲು ಕೇಂದ್ರ ಸರ್ಕಾರ ರೆಡಿಯಾಗಿಲ್ಲ.ಬಡವರಿಗೆ ಕೇಂದ್ರ ಸರ್ಕಾರ ಮಾಡುವ ದ್ರೋಹ ಇದಾಗಿದೆ.
 
ಆಕ್ಷನ್ ಮೂಲಕ ಅಕ್ಕಿ ಕೊಡ್ತಿದ್ದಾರೆ.ಖಾಸಗಿ ಅವರಿಗೆ ಮಾತ್ರವೇ ಅಕ್ಕಿ ಕೊಡ್ತಾರೆ, ಅದರಲ್ಲಿ ಸರ್ಕಾರ ಭಾಗಿಯಾಗವಂತೆ ಇಲ್ವಂತೆ.ಹಾಗಾದರೆ ಅಕ್ಕಿ ಇದೆ ಅಂತ ಆಯ್ತು.ಇದು ಕೇಂದ್ರ ಸರ್ಕಾರ ಬಡವರಿಗೆ ಮಾಡುವರಿಗೆ ದ್ರೋಹ ಮಾಡಿದೆ.ಇದು ಬಡವರ ಕಾರ್ಯಕ್ರಮ, ಯಡಿಯೂರಪ್ಪ ಹಾಗೂ ಬಸವರಾಜ ಹೋಗಿ ಕೇಂದ್ರಕ್ಕೆ ಒತ್ತಾಯ ಮಾಡ್ಲಿ ಅಕ್ಕಿ ಕೊಡಿ ಅಂತ ಹೇಳಿ ಎಂದು ಸಿಎಂ‌ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಮೇಲೆ ಆಪಾದನೆ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಜಿತ್ ರೈ ಮನೆ ಸೇರಿದಂತೆ ಒಟ್ಟು 12 ಕಡೆ ಏಕ ಕಾಲಕ್ಕೆ ದಾಳಿ ನಡೆಸಿದ್ದೇವೆ-ಲೋಕಾಯುಕ್ತ ಎಸ್.ಪಿ ಅಶೋಕ್