Publish Date: Sat, 04 Oct 2025 (10:13 IST)
Updated Date: Sat, 04 Oct 2025 (10:14 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ ಆರಂಭ ಆಗಲಿದೆ. ಸುಮಾರು 32 ಲಕ್ಷ ಮನೆಗಳ ಸಮೀಕ್ಷೆ ಆಗಲಿದ್ದು, ಗಣತಿದಾರರಿಗೆ ಎರಡು ವಾರಗಳ ಗಡುವು ನೀಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಇಂದಿನಿಂದ ಸಮೀಕ್ಷೆ ಆರಂಭ ಆಗುತ್ತಿದೆ. ಸಿಬ್ಬಂದಿ ಕೊರತೆಯಿಂದಾಗಿ ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭ ಆಗಿರಲಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ಟೋಬರ್ 7ಕ್ಕೆ ಸಮೀಕ್ಷೆ ಮುಕ್ತಾಯ ಆಗಲಿದೆ ಎಂದು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ವಿವರಿಸಿದ್ದಾರೆ.
ಒಟ್ಟು 32 ಲಕ್ಷ ಮನೆಗಳ ಸಮೀಕ್ಷೆ ಆಗಬೇಕಿದ್ದು, ಸಮೀಕ್ಷೆಗೆ 17 ಸಾವಿರ ಸಿಬ್ಬಂದಿಯನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. 100ರಿಂದ 150 ಮನೆ ಒಬ್ಬೊಬ್ಬರಿಗೆ ನೀಡಲಿದ್ದಾರೆ. ಸಮೀಕ್ಷೆ ಸಿಬ್ಬಂದಿ ಕಡಿಮೆ ಇರುವ ಸಮೀಕ್ಷೆ ಮುಕ್ತಾಯಕ್ಕೆ ಮೂರರಿಂದ ನಾಲ್ಕು ತಿಂಗಳಾದರೂ ತೆಗೆದುಕೊಳ್ಳಲಿದೆ ಎಂದು ಅಂದಾಜಿಸಲಿದೆ.
ರಾಜ್ಯದಲ್ಲಿ ಶೇ 64ರಷ್ಟು ಸಮೀಕ್ಷೆ ಮುಕ್ತಾಯ ಆಗಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಸಮೀಕ್ಷೆ ಇಂದಿನಿಂದ ಆರಂಭ ಆಗುತ್ತಿದೆ. ಹಾಗಾಗಿ ಒಟ್ಟು ರಾಜ್ಯದ ಸಮೀಕ್ಷೆ ಯಾವಾಗ ಮುಕ್ತಾಯ ಆಗಲಿದೆ ಎಂದು ಕಾದು ನೋಡಬೇಕಿದೆ.