Select Your Language

Notifications

webdunia
webdunia
webdunia
webdunia

ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿ ಬದಲು ಜಾತಿಗಣತಿ ಸಮೀಕ್ಷೆಯಲ್ಲಿರಲಿದೆ ಈ ಕಾಲಂ

Siddaramaiah

Krishnaveni K

ಬೆಂಗಳೂರು , ಶನಿವಾರ, 20 ಸೆಪ್ಟಂಬರ್ 2025 (14:06 IST)
ಬೆಂಗಳೂರು: ವಿವಾದಿತ ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿ ಕಾಲಂನ್ನು ಸಮೀಕ್ಷೆಯಿಂದ ಕಿತ್ತು ಹಾಕಿರುವ ರಾಜ್ಯ ಸರ್ಕಾರ ಹೊಸ ಕಾಲಂ ಸೇರ್ಪಡೆ ಮಾಡಿದೆ.

ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿಗಳ ಸೇರ್ಪಡೆ ಭಾರೀ ವಿವಾದಕ್ಕೊಳಗಾಗಿತ್ತು. ಸ್ವತಃ ಸಚಿವರಿಂದಲೇ ಈ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿವಾದಿತ ಕಾಲಂ ತೆಗೆದು ಹಾಕಲು ಸೂಚಿಸಿದ್ದರು.

ಇದೀಗ ಕ್ರಿಶ್ಚಿಯನ್ ಸಮುದಾಯಕ್ಕೆ ಎರಡು ಕಾಲಂ ಮಾಡಲಾಗಿದೆ. ಅದರಲ್ಲಿ ಒಂದು ಕ್ರಿಶ್ಚಿಯನ್ ಎಂದಿದ್ದರೆ ಇನ್ನೊಂದು ಮತಾಂತರ ಕ್ರಿಶ್ಚಿಯನ್ ಎಂಬ ಕಾಲಂ ಮಾಡಿ ವಿವಾದಕ್ಕೆ ಸದ್ಯಕ್ಕೆ ತೇಪೆ ಹಾಕಲಾಗಿದೆ. ಕ್ರಿಶ್ಚಿಯನ್ ಜೊತೆ ಹಿಂದೂ ಉಪಜಾತಿ ಕಾಲಂ ಕೈಬಿಡಲಾಗಿದೆ.

ಮತಾಂತರವಾದ ಕ್ರಿಶ್ಚಿಯನ್ ರು ಈಗ ಮೂಲ ಜಾತಿ ಉಲ್ಲೇಖ ಮಾಡುವಂತಿಲ್ಲ. ಬದಲಾಗಿ ಮತಾಂತರ ಕ್ರಿಶ್ಚಿಯನ್ ಎಂದು ಉಲ್ಲೇಖಿಸಬೇಕು. ಇದಕ್ಕೆ ಮೊದಲು ಬ್ರಾಹ್ಮಣ ಕ್ರಿಶ್ಚಿಯನ್, ದಲಿತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎಂದೆಲ್ಲಾ ಹಿಂದೂ ಉಪಜಾತಿ ಜೊತೆಗೆ ಕ್ರಿಶ್ಚಿಯನ್ ಕಾಲಂ ಮಾಡಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಕೇಸ್: ಚಿನ್ನಯ್ಯನ ಹೊಸ ವಿಡಿಯೋ ಹರಿಯಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ