Publish Date: Mon, 28 Oct 2019 (18:24 IST)
Updated Date: Mon, 28 Oct 2019 (18:26 IST)
ಜಾಮೀನು ಪಡೆದು ಹೊರಬರುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಹರಕೆಯನ್ನು ತೀರಿಸಿದ್ದಾರೆ.
ಮಂಡ್ಯದ ಸಂತೆಬಾಚಹಳ್ಳಿ ಹೋಬಳಿಯ ಸುಪ್ರಸಿದ್ಧ ಶ್ರೀ ಗವಿರಂಗನಾಥ ದೇವಸ್ಥಾನದ ಆವರಣದಲ್ಲಿ ಸಂತೆಬಾಚಹಳ್ಳಿ ಹೋಬಳಿಯ ಡಿ ಕೆ ಶಿವಕುಮಾರ್ ಅವರ ಅಭಿಮಾನಿಗಳು ಮೇಕೆ ಹರಕೆಯನ್ನು ಸಲ್ಲಿಸಿದ್ದಾರೆ.
ಅಭಿಮಾನಿಗಳು ಸುಪ್ರಸಿದ್ಧ ಶ್ರೀ ಗವಿರಂಗನಾಥ ದೇವರಿಗೆ ಕಟ್ಟಿಕೊಂಡಿದ್ದ ಮೇಕೆ ಹರಕೆಯನ್ನು ತೀರಿಸಿದ್ದಾರೆ. ಅಭಿಮಾನಿಗಳು ಡಿಕೆಶಿ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ನಂತರ ಬಂದಂತಹ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಿದರು.