Webdunia - Bharat's app for daily news and videos

Install App

ಪ್ರತಿಷ್ಠಿತ ಬ್ರಾಂಡ್ ಹೆಸರನ್ನ ನಕಲಿ ಮಾಡಿ ಬಟ್ಟೆ ಮಾರಾಟ..!

Webdunia
ಗುರುವಾರ, 30 ನವೆಂಬರ್ 2023 (15:00 IST)
ಪ್ರತಿಷ್ಠಿತ ಬ್ರಾಂಡ್ ಹೆಸರನ್ನ ನಕಲಿ ಮಾಡಿ ಬಟ್ಟೆ ಮಾರುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಸಿಸಿಬಿ ಜಪ್ತಿ ಮಾಡಿದೆ.

ದಾಳಿ ವೇಳೆ ಬರೋಬ್ಬರಿ 1.5 ಕೋಟಿ ಮೌಲ್ಯದ ಬಟ್ಟೆಯನ್ನು ಸಿಸಿಬಿ ಸೀಜ್ ಮಾಡಿದೆ. ಅರ್ಮನಿ, ಬರ್ಬರಿ, ಗ್ಯಾಂಟ್ ಸೇರಿದಂತೆ ಪ್ರತಿಷ್ಠಿತ ಬ್ರಾಂಡ್​​ಗಳ ಬಟ್ಟೆ ಎಂದು ಅಕ್ರಮ ಮಾರಾಟ ಮಾಡಲಾಗುತ್ತಿತು. ಪಟೇಲ್ ಎಕ್ಸ್​ಪೋರ್ಟ್​ ಹಾಗೂ ಆರ್. ಬಿ. ಫ್ಯಾಷನ್ ಗೋಡೌನ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ಬೇರೆ ಬೇರೆ ಕಡೆಯೂ ಇದೇ ರೀತಿ ಫೇಕ್ ಬ್ರಾಂಡ್ ಗೋಡೌನ್ ಹೊಂದಿರೋದು ಬೆಳಕಿಗೆ ಬಂದಿದೆ. S.R. ನಗರ, ಮಾಗಡಿ ರೋಡ್, ಬೇಗೂರು ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ನಕಲಿ ಬ್ರಾಂಡ್ ಬಟ್ಟೆಯ ಗೋಡೌನ್ ಇರೋದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಸಿಸಿಬಿ ಟೀಮ್ ತನಿಖೆ ಮುಂದುವರೆಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments