Select Your Language

Notifications

webdunia
webdunia
webdunia
webdunia

ಪೂಜಾ ಸಾಮಾಗ್ರಿ ಗೋಡೌನ್ ಗೆ‌ ಬೆಂಕಿ

ಪೂಜಾ ಸಾಮಾಗ್ರಿ ಗೋಡೌನ್ ಗೆ‌ ಬೆಂಕಿ
ಸತೀಶ್ ಸ್ಟೋರ್‌ ಎಂಬಾ ಗೋಡೌನ್ ಗೆ ಬೆಂಕಿ ಬಿದ್ದಿದ್ದು,ಪೂಜಾ ಸಾಮಾಗ್ರಿಗಳನ್ನು ಇಟ್ಟಿದಂತಹ ಗೋಡೌನ್ ಹೊತ್ತಿಉರಿದಿದೆ. ರಾತ್ರಿ 11:30 ರ ಸುಮಾರಿಗೆ ಅವಘಡ ನಡೆದಿದೆ.ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಗೋಡೌನ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಗೋಡೌನ್ ಒಳಭಾಗದಲ್ಲಿದ್ದ ಕರ್ಪುರ, ಊದಿನ ಕಡ್ಡಿ , ದೀಪದ ಎಣ್ಣೆ ಮತ್ತು  ಇತರೆ ಪೂಜಾ ಸಾಮಾಗ್ರಿಗಳು ಬೆಂಕಿಯಿಂದ ಭಸ್ಮವಾಗಿದೆ.ಪೂಜಾ ಸಾಮಾಗ್ರಿಗಳಿಗೆ ಬೆಂಕಿ ‌ಹೊತ್ತಿಕೊಂಡಿದ್ದ‌ ಹಿನ್ನಲೆ ಬೆಂಕಿ ನಂದಿಸಲು ‌ಹರಸಾಹಸಪಡಲಾಗಿದ್ದು,ಮೂರು ಅಗ್ನಿ ಶಾಮಕ‌ ವಾಹನ ಸ್ಥಳಕ್ಕೆ ದೌಡಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂಕಪ್ರಾಣಿಯ ಮೇಲೆ ಕಾರು ಹತ್ತಿಸಿ ಪರಾರಿಯಾದ ಭೂಪ ಅಂದರ್