Publish Date: Mon, 09 Jan 2023 (09:45 IST)
Updated Date: Mon, 09 Jan 2023 (09:47 IST)
ಬೆಂಗಳೂರು : ರಾಜ್ಯದ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಪ್ರತಿ ಲೊಕಸಭಾ ಕ್ಷೇತ್ರಕ್ಕೆ ವೀಕ್ಷಕರನ್ನ ನೇಮಕ ಮಾಡಿದೆ.
ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ಎಐಸಿಸಿಯಿಂದಲೇ ವೀಕ್ಷಕರನ್ನ ನೇಮಕ ಮಾಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಲೋಕಸಭಾವಾರು ವೀಕ್ಷಕರ ನೇಮಕ ಮಾಡಿರೊ ಎಐಸಿಸಿ, ಟಿಕೆಟ್ ಹಂಚಿಕೆ ಸೇರಿದಂತೆ ಎಲ್ಲಾ ಬೆಳವಣಿಗೆಯ ಬಗ್ಗೆ ವೀಕ್ಷಕರು ನಿಗಾ ವಹಿಸಲಿದ್ದಾರೆ ಎಂದು ಹೇಳಿದೆ.
28 ಲೋಕಸಭಾ ಕ್ಷೇತ್ರಗಳಿಗೆ ಒಬ್ಬೊಬ್ಬ ವೀಕ್ಷಕರ ನೇಮಿಸಿದ್ದು, ಪ್ರತಿ ಕ್ಷೇತ್ರದ ಟಿಕೆಟ್ ಹಂಚಿಕೆ ಹಾಗೂ ಪಕ್ಷದ ಚುನಾವಣಾ ಚಟುವಟಿಕೆಗಳು ವೀಕ್ಷಕರ ಕಣ್ಗಾವಲಿನಲ್ಲೇ ನಡೆಯಲಿದೆ.