Select Your Language

Notifications

webdunia
webdunia
webdunia
webdunia

ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ರೇಡ್

ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ರೇಡ್
bangalore , ಭಾನುವಾರ, 24 ಡಿಸೆಂಬರ್ 2023 (16:00 IST)
ಬಸವೇಶ್ವರ ನಗರ ಠಾಣೆಯ ಕೂಗಳತೆ ದೂರದಲ್ಲೇ ಇರುವ ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಅಕ್ರಮವಾಗಿ ಜನರನ್ನ ಸೇರಿಸಿ ಕ್ಲಬ್ ಓನರ್ ಅಡಿಗ ಇಸ್ಪೀಟ್ ಆಡುತ್ತಿದ್ದ.ಬಸವೇಶ್ವರನಗರ ಪೊಲೀಸರು ವ್ಯವಸ್ಥಿತ  ಟೀಂ ದಾಳಿ ಮಾಡಿ ಸುಮಾರು 250 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆಯಲಾಗಿದೆ.

ಲಕ್ಷಾಂತರ ರೂಪಾಯಿ ಹಣ, ಹಲವು ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.ಮೊದಲ ಬಾರಿ ರೇಡ್ ನಲ್ಲಿ ಅಡಿಗ ಸೇರಿದಂತೆ ಎಲ್ಲಾ  ಆರೋಪಿಗಳನ್ನ ಜೈಲಿಗೆ ಅಟ್ಟಲಾಗಿತ್ತು.ಜೈಲಿನಿಂದ ಹೊರಬಂದ ನಂತರ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ.
 
ಪೋಲಿಸರ ವಿರುದ್ಧವೇ ತೋಡೆ ತಟ್ಟಿ ಮತ್ತೆ ಇಸ್ಪೀಟ್ ಅಡ್ಡೆ ಓಪನ್ ಮಾಡಿದ್ದ.ವಿಜಯನಗರ ಸಬ್ ಡಿವಿಷನ್ ಎಸಿಪಿ ಚಂದನ್ ನೇತೃತ್ವದಲ್ಲಿ ಈಗ ಎರಡನೇ ಬಾರಿ ಅಶೋಕ್ ಅಡಿಗ ಎಂಬಾತ ನಡೆಸ್ತಿದ್ದ ಇಸ್ಪೀಟ್ ಕ್ಲಬ್ ಮೇಲೆ ದಾಳಿ ಮಾಡಲಾಗಿದೆ.ಎಷ್ಟು ಸಾರಿ ಹೇಳಿದರೂ ಪದೇ ಪದೇ ಅಶೋಕ್ ಅಡಿಗ ಓಪನ್ ಮಾಡುತ್ತಿದ್ದ.ವಿಜಯನಗರ ಉಪ ವಿಭಾಗ ಪೊಲೀಸ್ರಿಂದ ದಾಳಿ ನಡೆದಿದ್ದು,ಇಸ್ಪೀಟ್ ಆಟ ಕಳೆದ 15 ದಿನಗಳಿಂದ ನಡೆಯುತ್ತಿದ್ದು,ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಸಾರಿಗೆ ಇಲಾಖೆಗೆ ಶಾಕಿಂಗ್ ನ್ಯೂಸ್ ಕೊಟ್ಟ ಪ್ರಯಾಣಿಕರು