ಜನಾರ್ಧನ ರೆಡ್ಡಿಯ 57 ಕೆಜಿ ಚಿನ್ನದ ರಹಸ್ಯ ಪತ್ತೆ ಮಾಡಲು ಪೊಲೀಸರ ಹರಸಾಹಸ

ಶುಕ್ರವಾರ, 9 ನವೆಂಬರ್ 2018 (09:37 IST)
ಬಳ್ಳಾರಿ: ಆಂಬಿಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಮಾಡಲು 57 ಕೆಜಿ ಚಿನ್ನ ಪಡೆದಿದ್ದಾರೆಂಬ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ಇನ್ನೂ ಪತ್ತೆಯಾಗಿಲ್ಲ.

ಈ ನಡುವೆ ಅವರು ಲಂಚದ ರೂಪದಲ್ಲಿ ಪಡೆದಿದ್ದ 57 ಕೆಜಿ ಚಿನ್ನಕ್ಕಾಗಿ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಸಿರಗುಪ್ಪದ ಅವರ ನಿವಾಸದಲ್ಲಿ ತೀವ್ರ ತಪಾಸಣೆ ನಡೆಸಿದ್ದ ಸಿಸಿಬಿ ಪೊಲೀಸರ ತಂಡ ರೆಡ್ಡಿಗೆ ಸೇರಿದ ಇತರ ನಿವಾಸಗಳಲ್ಲೂ ತಪಾಸೆಣೆ ನಡೆಸುತ್ತಿದೆ.

ಹಾಗಿದ್ದರೂ ಇದುವರೆಗೆ ಚಿನ್ನದ ಬಗ್ಗೆ ಸುಳಿವು ಸಿಕ್ಕಿಲ್ಲ. ಇನ್ನೊಂದೆಡೆ ಜನಾರ್ಧನ ರೆಡ್ಡಿ ಬಂಧನಕ್ಕಾಗಿ ಬಲೆ ಬೀಸಿರುವ ಪೊಲೀಸರು ಮೂರು ತಂಡಗಳಾಗಿ ಅವರನ್ನು ಪತ್ತೆ ಮಾಡಲು ಹರಸಾಹಸ ಮಾಡುತ್ತಿದೆ. ಆದರೆ ರೆಡ್ಡಿ ಇರುವಿಕೆ ಬಗ್ಗೆ ಇದುವರೆಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೂರು ದಿನ ಸಿಎಂ ಕುಮಾರಸ್ವಾಮಿಗೆ ರೆಸ್ಟ್: ಟಿಪ್ಪು ಜಯಂತಿಗೆ ಗೈರು