Publish Date: Sun, 11 Dec 2022 (20:15 IST)
Updated Date: Sun, 11 Dec 2022 (20:30 IST)
ರಾಜಧಾನಿಯಲ್ಲಿನ ಇಂದಿರಾನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕೆಸಿನೋ ಆಡುತ್ತಿದ್ದ ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಇಂದಿರಾನಗರದ ಬಳಿಯ 80 ಫೀಟ್ ರಸ್ತೆಯಲ್ಲಿರೋ ಬಿಲ್ಡಿಂಗ್ ಒಂದರ ನಾಲ್ಕನೆ ಮಹಡಿಯಲ್ಲಿ ಅಕ್ರಮವಾಗಿ ಆಡುತ್ತಿದ್ದ ಅಡ್ಡೆಯ ಮೇಲೆ ಸಿಸಿಬಿ ಅಧಿಕಾರಿಗಳು ಪಕ್ಕಾ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾರೆ.
ಇನ್ನು ಈ ಕೆಸಿನೋವನ್ನು ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಓರ್ವ ನಡೆಸುತ್ತಿದ್ದ ಎಂದು ಹೇಳಲಾಗುತ್ತಿದ್ದ, ಸದ್ಯ ಸಿಸಿಬಿ ಪೊಲೀಸರು ಇದೀಗ ಅಲ್ಲಿ ಸಿಕ್ಕಂತಹ ಕಾಯಿಂನ್ಸ್, ಹಣ, ಸಿಸಿಟಿವಿ ಫುಟೇಜ್ ಇನ್ನು ಅನೇಕ ದಾಖಲಾತಿಗಳನ್ನು ಸಹ ತಮ್ಮ ವಶಕ್ಕೆ ಪಡೆದಿದ್ದು 15 ಕ್ಕು ಹೆಚ್ಚು ಜನರನ್ನು ಸಹ ಕರೆದೊಯ್ದು ವಿಚಾರಣೆ ಮುಂದುವರಿಸಿದ್ದಾರೆ.