ಪಾಕ್ ಗೂಢಾಚಾರಿ ಬಂಧನ ಪ್ರಕರಣ ಸಂಬಂಧ 12 ದಿನಗಳ‌ ಪೊಲೀಸ್ ವಶಕ್ಕೆ ಪಡೆದುಕೊಂಡಿರುವ ಸಿಸಿಬಿ

Webdunia
ಮಂಗಳವಾರ, 21 ಸೆಪ್ಟಂಬರ್ 2021 (21:31 IST)
ಬೆಂಗಳೂರು: ಪಾಕ್ ಗೂಢಾಚಾರಿ ಬಂಧನ ಪ್ರಕರಣ ಸಂಬಂಧ 12 ದಿನಗಳ‌ ಪೊಲೀಸ್ ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ವಿವಿಧ‌ ಆಯಮಾಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಆತನ ಮೊಬೈಲ್ ಅನ್ನು ಎಫ್​​ಎಸ್​​ಎಲ್​​​ಗೆ ರವಾನಿಸಲಾಗಿದೆ.
ಸೇನಾನೆಲೆ ಹಾಗೂ ದೇಶದ ಪ್ರಮುಖ ಸ್ಥಳಗಳ ಬಗೆಗಿನ ವಿವರಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಇಂಟರ್​ ಸರ್ವೀಸಸ್ ಇಂಟೆಲಿಜೆನ್ಸ್​ಗೆ (ಐಎಸ್ಐ) ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಮಿಲಿಟರಿ ಗುಪ್ತಚರದ ದಕ್ಷಿಣ ಕಮಾಂಡೊ ತಂಡ ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದರು. ಕಾಟನ್​ಪೇಟೆಯ ಜಾಲಿ ಮಹೊಲ್ಲಾದಲ್ಲಿ ಜಿತೇಂದರ್ ಸಿಂಗ್ ಎಂಬಾತನನ್ನು ಬಂಧಿಸಿದ್ದರು.
ಸೇನಾನೆಲೆ ಹಾಗೂ ವಾಹನಗಳಿಗೆ ಸಂಬಂಧಿಸಿದ ಗುಪ್ತ ಮಾಹಿತಿಯ ಫೋಟೊಗಳನ್ನು ನಿರಂತರವಾಗಿ ಪಾಕಿಸ್ತಾನದ ಐಎಸ್ಐ ಅಧಿಕಾರಿಗೆ ಕಳುಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಇಂಟಿಲಿಜೆನ್ಸ್ ಆಫ್ ಬ್ಯೂರೋ (ಐಬಿ) ಜಿತೇಂದರ್ ಮೊಬೈಲ್ ಟ್ರ್ಯಾಕ್, ಲೊಕೇಷನ್ ಸರ್ಚ್ ಮಾಡಿದಾಗ ಬೆಂಗಳೂರಿನಲ್ಲಿ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ ಐಬಿ, ಕಾಟನ್​​ಪೇಟೆಯಲ್ಲಿ ವಾಸವಾಗಿದ್ದ ಆರೋಪಿಯನ್ನು ಬಂಧಿಸಿದ್ದರು.
ವಿಚಾರಣೆ ಎದುರಿಸುತ್ತಿರುವ ಜಿತೇಂದರ್ ಸಿಂಗ್ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ಎಫ್​​ಎಸ್​ಎಲ್​ಗೆ ಕಳುಹಿಸಲಾಗಿದೆ. 2018ರಲ್ಲಿ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದ ಜಿತೇಂದರ್ ಸಿಂಗ್, ಬೀದಿಬದಿ ವ್ಯಾಪಾರಿಗಳಿಗೆ ಬಟ್ಟೆ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮೋದಿ ವಿದೇಶಕ್ಕೆ ಹೋಗಲ್ವಾ, ರಾಹುಲ್ ಹೋದ್ರೆ ತಪ್ಪೇನು ಎಂದ ಮಲ್ಲಿಕಾರ್ಜುನ ಖರ್ಗೆ: ಯಾಕೆ ಹೋಗ್ತಾರೆ ಎಂದ ನೆಟ್ಟಿಗರು

ಜಾತಿ ಸರ್ಟಿಫಿಕೇಟ್ ಪಡೆಯುವುದು ಹೇಗೆ, ಯಾವ ದಾಖಲೆಗಳು ಬೇಕು ಇಲ್ಲಿದೆ ಮಾಹಿತಿ

ಡಿಕೆ ಶಿವಕುಮಾರ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರಹಸ್ಯ ಮೀಟಿಂಗ್: ನಡೆದಿದ್ದೇನು

ಮುಂದಿನ ಸುದ್ದಿ
Show comments