Publish Date: Sat, 24 Nov 2018 (13:41 IST)
Updated Date: Sat, 24 Nov 2018 (13:42 IST)
ಜೂಜಾಟ ಅಡ್ಡೆ ಮೇಲೆ ದಾಳಿನಡೆಸಿರುವ ಸಿಸಿಬಿ ಪೊಲೀಸರು 40 ಜನರನ್ನು ಬಂಧಿಸಿದ್ದಾರೆ.
ಕೆ.ಆರ್.ಪುರಂ ನಲ್ಲಿರುವ ಡಿಲೈಟ್ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 40 ಜನರನ್ನು ಬಂಧಿಸಿದ್ದಾರೆ. ಗೋವಾ ಮಾದರಿಯಲ್ಲಿ ನಡೆಯುತ್ತಿದ್ದ ಕ್ಯಾಸಿನೋ ಕ್ಲಬ್ ನ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಬಂಧಿತರಿಂದ 7.41 ಲಕ್ಷ ರೂ. ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಿಸಿಬಿಯ ಎಸಿಪಿ ಪಿ.ಟಿ.ಸುಬ್ರಮಣ್ಯ ನೇತೃತ್ವದಲ್ಲಿ ನಡೆದ ದಾಳಿ ಇದಾಗಿದೆ.
ಮಂಗಳೂರು ಮೂಲದ ಮಣಿಕಂಠ ಡಿಲೈಟ್ ರಿಕ್ರಿಯೇಷನ್ ಕ್ಲಬ್ನಲ್ಲಿ ಕ್ಯಾಸಿನೊ ನಡೆಸುತ್ತಿದ್ದು ಕ್ಯಾಸಿನೊ ಆಡಲು ಇಲ್ಲಿಗೆ ವಿವಿದೆಢೆಯಿಂದ ಜನರು ಬರುತ್ತಿದ್ದರು.
ಆನ್ಲೈನ್ ಮೂಲಕ ಜೂಜು ಆಡಲು ಕೆಲವು ಗ್ರಾಹಕರು ಹಣ ಪಾವತಿ ಮಾಡುತ್ತಿದ್ದರು. ಮಾಹಿತಿ ಆಧರಿಸಿ ನಡೆದ ದಾಳಿಯಲ್ಲಿ ಒಟ್ಟು 37.41 ಲಕ್ಷ ರೂ. ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.