Select Your Language

Notifications

webdunia
webdunia
webdunia
webdunia

ನರೇಗಾ ಹಣ ದುರ್ಬಳಕೆ ಪ್ರಕರಣ: ಸಿ.ಬಿ.ಐ ಹೆಗಲಿಗೆ ತನಿಖೆ ಹೊಣೆ

ನರೇಗಾ ಹಣ ದುರ್ಬಳಕೆ ಪ್ರಕರಣ: ಸಿ.ಬಿ.ಐ ಹೆಗಲಿಗೆ ತನಿಖೆ ಹೊಣೆ
ಹನೂರು , ಶುಕ್ರವಾರ, 4 ಜನವರಿ 2019 (19:01 IST)
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಲಾನಯನ ಇಲಾಖೆಯಲ್ಲಿ ಅಕ್ರಮ ಹಾಗೂ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯ ಪ್ರಕರಣದ ತನಿಖೆಯನ್ನು ಸಿ.ಬಿ. ಗೆ ವಹಿಸಲು ಆದೇಶ ನೀಡಿದೆ.
  

ಚಾಮರಾಜನಗರಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಲಾನಯನ ಇಲಾಖೆಯಲ್ಲಿ ಅಕ್ರಮ ಹಾಗೂ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯ ಪ್ರಕರಣದ ತನಿಖೆಯನ್ನು ಸಿ.ಬಿ. ಗೆ ವಹಿಸಲು ಆದೇಶ ನೀಡಿದೆ.

ಸರ್ವೋಚ್ಛ ನ್ಯಾಯಲಾಯದ ನ್ಯಾಯಮೂರ್ತಿಗಳಾದ ಕನ್ವಿಲ್ಕರ್ ಹಾಗೂ ಮುಕುಲ್ರೊಹಠಗಿ ಒಳಗೊಂಡ ದ್ವಿಸದಸ್ಯ ಪೀಠದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಮೂಲಕ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತ ತೀರ್ಪು ಹಾಗೂ ಕರ್ನಾಟಕ ಹೈಕೋರ್ಟ್ತೀರ್ಪನ್ನು ತಳ್ಳಿ ಹಾಕಿದಂತಾಗಿದೆ. ಪ್ರಕರಣದಲ್ಲಿ ಪಾರಾಗಿದ್ದೇವು ಎಂದು ಕೊಂಡವರು ಸಿಬಿಐ ಕುಣಿಕೆಗೆ ಬೀಳುವ ಮೂಲಕ ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದೆ.

ಮೇಲ್ಮನವಿದಾರರ ಪರವಾಗಿ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ ವಕೀಲರಾದ ಪ್ರಶಾಂತ್ಭೂಷಣ್, ಪ್ರೀನ್ಸ್ಐಸಾಕ್ರವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ಇಡೀ ಜಿಲ್ಲೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲು ಸಿಬಿಐ ಗೆ ವಹಿಸಬೇಕೆಂದು ಮನವಿ ಮಾಡಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಧಂ ಹೊಡೆಯೋದು ಬೇಡ ಅಂತಿದ್ದಾರೆ ಡಿಸಿಎಂ!