Select Your Language

Notifications

webdunia
webdunia
webdunia
webdunia

ಇನ್ಮುಂದೆ ಕಾವೇರಿ ನೀರು ಇನ್ನಷ್ಟು ಕಾಸ್ಟ್ಲಿ…!

Cauvery water will be more expensive from now on
bangalore , ಶನಿವಾರ, 10 ಜೂನ್ 2023 (20:11 IST)
ರಾಜಧಾನಿ ಜನರಿಗೆ ಶಾಕ್ ಮೇಲೆ ಶಾಕ್ ಕಾಡ್ತಾನೇ ಇದೆ. ಶ್ರೀ ಸಾಮಾನ್ಯ, ಮಧ್ಯಮ ವರ್ಗದ ಜನರಂತೂ ಈ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಾನೇ ಇಲ್ಲ. ಎಲ್ಲವೂ ತುಂಬಾನೇ ಕಾಸ್ಟ್ಲಿ ಆಗೋಗ್ಬಿಟ್ಟಿದೆ.. ಯೆಸ್ ಸರ್ಕಾರಿ ಇಲಾಖೆಗಳಂತೂ ನಷ್ಟದ ನೆಪವೊಡ್ಡಿ ಕರೆಂಟ್ ದರ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನ ಏರಿಕೆ ಮಾಡ್ತಾನೇ ಬಂದಿದೆ. ಆದ್ರೆ ಈಗ ಬೆಂಗಳೂರು ಜಲಮಂಡಳಿಯ ಸರದಿ.ಸ್ಕಾಂಗಳಂತೆ ಬೆಂಗಳೂರು ಜಲಮಂಡಳಿಗೂ ನೀರಿನ ದರ ಏರಿಕೆಗೆ ಅನುಮತಿ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿಕೊಂಳ್ಳಲಿದೆ ಅಂತೇ.. ಈಗಾಗ್ಲೇ ಡಿ ಸಿ ಎಂ ಡಿ. ಕೆ ಶಿವಕುಮಾರ್ ಜೊತೆ ಸಭೆ ನಡೆಸಿದ ಜಲಮಂಡಳಿಯ ಅಧಿಕಾರಿಗಳು ದರ ಪರಿಷ್ಕರಣೆಯ ವಿಷಯ ಪ್ರಸ್ತಾಪಿಸಿದ್ದಾರಂತೆ.ಈ ಹಿಂದೆ 2014ರಲ್ಲಿ ನೀರಿನ ದರವನ್ನ ಏರಿಸಿತ್ತು. ಅದಕ್ಕೂ ಮುನ್ನ 2009ರಲ್ಲಿ ನೀರಿನ ದರ ಏರಿಕೆಯ ಶಾಕ್ ಅನ್ನ ನೀಡಿತ್ತು. ಆಗೊಮ್ಮೆ ಹೀಗೊಮ್ಮ ದರ ಏರಿಸಿದ್ರೆ, ಹೊಸ ಯೋಜನೆಗಳು ಕೈಗೊಳ್ಳುವುದು ಕಷ್ಟ. ಆಡಳಿತ ನಿರ್ವಹಣೆ ವೆಚ್ಚಗಳನ್ನು ಸರಿದೂಗಿಸಲು ಸವಾಲು ಹೀಗಾಗಿ ನೀರಿನ ದರ ಹೆಚ್ಚಳಕ್ಕೆ ಅವಕಾಶ ಕೊಡಿ ಅಂತ ಬೆಂಗಳೂರು ಜಲಮಂಡಳಿ ಸರ್ಕಾರದ ಬಳಿ ವಾದ ಮಂಡಿಸುತ್ತಿದೆ.

ಮಂಡಳಿಯ ತಿಂಗಳ ಆದಾಯ ಸುಮಾರು 110 ಕೋಟಿ ರೂ. ಆದ್ರೆ ನೀರು ಪಂಪ್ ಮಾಡಲು ಜಲಮಂಡಳಿ 78 ಕೋಟಿ ವಿದ್ಯುತ್ ಶುಲ್ಕ ಭರಿಸುತ್ತೆ. ಸಿಬ್ಬಂದಿ ವೇತನ, ದುರಸ್ಥಿ, ಪೈಪ್ ಗಳ ಬದಲಾವಣೆ, ಹೊಸ ಯೋಜನೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಉಳಿದ ಮೊತ್ತ ಸಾಲುವುದಿಲ್ಲ. 1998ರ ಸಂದರ್ಭದಲ್ಲಿ ತಿಂಗಳಿಗೆ 3 ಕೋಟಿ ಕರೆಂಟ್ ಬಿಲ್ ಬರ್ತಾ ಇದ್ದು ಆದ್ರೀಗ ಸರಿಸುಮಾರು 70 ಕೋಟಿ. ರೂ ದಾಟಿದೆ. ಪ್ರತಿ ವರ್ಷ ವಿದ್ಯುತ್ ಬಿಲ್ ಜಾಸ್ತಿ ಆಗ್ತಿದೆ. ಅದಕ್ಕೆ ತಕ್ಕಂತೆ, ನೀರಿನ ದರ ಕೂಡ ಪರಿಷ್ಕರಣೆ ಆಗಬೇಕಿದೆ. ಹೀಗಾಗಿ ಈ ಬಾರಿ ನೀರಿನ ದರ ಹೆಚ್ಚಳಕ್ಕೆ ಬೆಂಗಳೂರು ಜಲಮಂಡಳಿ ಸರ್ಕಾರ ಮೊರೆ ಹೋಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶರದ್​ ಪವಾರ್​ಗೆ ಕೊಲೆ ಬೆದರಿಕೆ