Publish Date: Sun, 14 Mar 2021 (12:45 IST)
Updated Date: Sun, 14 Mar 2021 (12:46 IST)
ಬೆಂಗಳೂರು : ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ವಿಡಿಯೋ ಬಿಡುಗಡೆ ಬಗ್ಗೆ ಮಾತಾಡಲ್ಲ. ಪ್ರಕರಣ ಕುರಿತು ಸದನದಲ್ಲಿ ಮಾತನಾಡುವೆ. ಪ್ರಕರಣದ ಬಗ್ಗೆ ತನಿಖೆ ಆಗಲಿ. ಯಾರೇ ತಪ್ಪಿತಸ್ಥರು ಆಗಿದ್ರು ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.