ಸಿನಿಮಾ ರೀತಿಯಲ್ಲಿ ಚಿಪ್ಪಂದಿಕಳ್ಳರ ಸೆರೆ

Webdunia
ಭಾನುವಾರ, 28 ಅಕ್ಟೋಬರ್ 2018 (18:39 IST)
ಚಿಪ್ಪಂದಿ ಕಳ್ಳರ ಮಾರಾಟದ ಜಾಡು ಹಿಡಿದು ಸಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸಿನಿಮಾ ರೀತಿಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನಕಪುರದ ಅನಿಲ್ ಕುಮಾರ್, ಬೆಂಗಳೂರಿನ ಇನಾಯತ್  ಬಂಧಿತ ಆರೋಪಿಗಳಾಗಿದ್ದಾರೆ. ಚಿಪ್ಪಂದಿ ಕಳ್ಳರ ಮಾರಾಟದ ಜಾಡು ಹಿಡಿದು ಸಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದರು. 

ಗಿರಾಕಿಗಳ ವೇಷದಲ್ಲಿ ತೆರಳಿ ಆರೋಪಿಗಳ ಸೆರೆ ಹಿಡಿದ ಅರಣ್ಯ ಸಿಬ್ಬಂದಿ ತೋಡಿದ್ದ ಖೆಡ್ಡಕ್ಕೆ ಬಂದು ಚಿಪ್ಪಂದಿ ಕಳ್ಳರು ಬಿದ್ದಿದ್ದಾರೆ.
ಮಂಡ್ಯ ಜಿಲ್ಲೆಯ ಹಲಗೂರು ಬಳಿ ಆರೋಪಿಗಳ ಬಂಧನ ಮಾಡಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರ್ ಹಾಗೂ ಜೀವಂತ ಚಿಪ್ಪಂದಿ ವಶ ಪಡಿಸಿಕೊಳ್ಳಲಾಗಿದೆ.

ಚಿಪ್ಪಂದಿಯನ್ನು ಚಿತ್ರದುರ್ಗದ ಬಳಿ ಸೆರೆ ಹಿಡಿದಿರೋದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಚಿಪ್ಪಂದಿಗಳು ಮನೆಯಲ್ಲಿದ್ದರೆ ಸಂಪತ್ತು ಹೆಚ್ಚಾಗುತ್ತೆ ಅನ್ನೋ ನಂಬಿಕೆ ಇದೆ. ಮತ್ತೊಂದೆಡೆ ಚಿಪ್ಪಂದಿ ಮಾಂಸ ಹಾಗೂ ಚಿಪ್ಪುಗಳಿಗೆ ವಿದೇಶಗಳಲ್ಲಿ ಬಹಳ ಬೇಡಿಕೆಯೂ ಇದೆ. ಚಿಪ್ಪಂದಿ ಚಿಪ್ಪುಗಳಿಂದ ಅಭರಣಗಳ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ.  

ಸಂಚಾರಿ ದಳ ಡಿಸಿಎಫ್ ಪೂವಯ್ಯ ನೇತೃತ್ವದ ತಂಡದಿಂದ ನಡೆದ ಕಾರ್ಯಾಚರಣೆ ಇದಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments