Select Your Language

Notifications

webdunia
webdunia
webdunia
Friday, 11 April 2025
webdunia

ಜೀವಭಯ ಸೃಷ್ಟಿಸಿದ್ದ ಚಿರತೆ ಸೆರೆ!

ಚಿರತೆ
ಹಾಸನ , ಬುಧವಾರ, 6 ಫೆಬ್ರವರಿ 2019 (15:05 IST)
ಕರು, ನಾಯಿಗಳನ್ನು ಹೊತ್ತೊಯ್ದು ತಿನ್ನುತ್ತಲೇ ಜನರಲ್ಲಿ ಜೀವಭಯಕ್ಕೆ ಕಾರಣವಾಗಿದ್ದ ಚಿರತೆಯನ್ನು ಸೆರೆಹಿಡಿಯಲಾಗಿದೆ.

ಗ್ರಾಮದ ಹೊಲದಲ್ಲಿ ಅರಣ್ಯ ಇಲಾಖೆ ಇಡಲಾಗಿದ್ದ ಬೋನಿಗೆ ಚಿರತೆ ಬಿದ್ದಿದೆ. ಹಾಸನದ ಹೊರ ವಲಯದಲ್ಲಿರುವ  ದೊಡ್ಡಕೊಂಡಗೊಳ ಗ್ರಾಮದಲ್ಲಿ ಘಟನೆ ನಡೆದಿದೆ.

ಹಲವು ತಿಂಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ಕರುಗಳು, ನಾಯಿಗಳನ್ನು ಹೊತ್ತೊಯ್ದಿದ್ದ ಚಿರತೆ ಸೆರೆಯಾಗಿದ್ದರಿಂದಾಗಿ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಚಿರತೆ ಹಾವಳಿಗೆ ಗ್ರಾಮಸ್ಥರು ಆತಂಕಗೊಂಡಿದ್ದರು. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದ ಗ್ರಾಮಸ್ಥರು, ಸಧ್ಯ ನಿರಾಳರಾಗಿದ್ದಾರೆ. ಚಿರತೆಯನ್ನು ಬೇರೆ ಕಾಡಿಗೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ಅಧಿವೇಶನದಲ್ಲಿ ಅರ್ಧದಲ್ಲೇ ಭಾಷಣ ಮೊಟುಕುಗೊಳಿಸಿದ ರಾಜ್ಯಪಾಲರು