Publish Date: Wed, 06 Feb 2019 (13:31 IST)
Updated Date: Wed, 06 Feb 2019 (13:34 IST)
ಬೆಂಗಳೂರು : ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಸರ್ಕಾರದಲ್ಲಿ ಬಹುಮತವಿಲ್ಲದ ಹಿನ್ನಲೆಯಲ್ಲಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ್ದ ಪರಿಣಾಮ ರಾಜ್ಯಪಾಲರ ಭಾಷಣ ಅರ್ಧದಲ್ಲೇ ಮುಕ್ತಾಯಗೊಂಡಿದೆ.
ರಾಜ್ಯಪಾಲ ವಿ.ಆರ್.ವಾಲಾ ಅವರು ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಭಾವಿಗೆ ಇಳಿದು ಸರ್ಕಾರಕ್ಕೆ ಸದಸ್ಯರ ಬೆಂಬಲ ಇಲ್ಲ ಎಂದು ಹೇಳಿ ಪ್ರತಿಭಟನೆಗೆ ಇಳಿದರು.
ಪ್ರತಿಭಟನೆಯಿಂದ ಗದ್ದಲ ಏರ್ಪಟ್ಟ ಕಾರಣ ರಾಜ್ಯಪಾಲರು ಒಟ್ಟು 22 ಪುಟಗಳ ಭಾಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.