Webdunia - Bharat's app for daily news and videos

Install App

ಆರಂಭದಲ್ಲಿಯೇ ಮುನ್ನೆಚ್ಚರ ವಹಿಸಿದ್ದಲ್ಲಿ ಕ್ಯಾನ್ಸರ್ ರೋಗ ಗುಣಪಡಿಸಬಹುದು: ಡಾ.ಕಾರ್ಯಪ್ಪ

Webdunia
ಶನಿವಾರ, 5 ಫೆಬ್ರವರಿ 2022 (21:09 IST)
ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡೀನ್ ಹಾಗೂ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ ವಹಿಸಿದ್ದರು.  
 ಡಾ.ಕೆ.ಬಿ.ಕಾರ್ಯಪ್ಪ ಅವರು ಮಾತನಾಡಿ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಭಯ ಬೇಡ, ಕಾಯಿಲೆಯನ್ನು ಅದಷ್ಟು ಬೇಗ ಪ್ರಾರಂಭಿಕ ಹಂತದಲ್ಲೆ ಪತ್ತೆಹಚ್ಚಿದರೆ ಅದರಿಂದ ಗುಣಮುಖರಾಗಬಹುದು ಎಂದು ತಿಳಿಸಿದರು. 
ಸರ್ಕಾರದಿಂದ ಕ್ಯಾನ್ಸರ್ ಕಾಯಿಲೆಗೆ ಉಚಿತವಾದ ಚಿಕಿತ್ಸೆಯನ್ನು ಸಾರ್ವಜನಿಕರಿಗೆ ನೀಡುವ ಸೌಲಭ್ಯವಿದ್ದು, ಆಯುμÁ್ಮನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.
   ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಶರವಣನ್ ಅವರು ಕಾರ್ಯಕ್ರಮದಲ್ಲಿ ಇಂದಿನ ದಿನಮಾನದಲ್ಲಿ ಕ್ಯಾನ್ಸರ್ ರೋಗಗ್ರಸ್ತವಾಗಿರುವುದರಿಂದ ಕ್ಯಾನ್ಸರ್ ಜಾಗೃತಿಯ ಮಹತ್ವದ ಕುರಿತು ಮಾತನಾಡಿದರು.
 ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥರಾದ ಡಾ.ಪ್ರವೀಣ್ ಕುಮಾರ್ ಅವರು ಕ್ಯಾನ್ಯರ್ ಪ್ರಸ್ತುತಿಯ ಬಗ್ಗೆ ಸಾರ್ವಜನಿಕರಿಗೆ ಅರಿವು ನೀಡಿದರು. ಯಾವುದೇ ವ್ಯಕ್ತಿಯಲ್ಲಿ ಗಡ್ಡೆ ಅಥವಾ ವಾಸಿ ಆಗದಿರುವ ಗಾಯ ಕಂಡುಬಂದಲ್ಲಿ ಅದು ಕ್ಯಾನ್ಸರ್ ಕಾಯಿಲೆ ಲಕ್ಷಣ ಆಗಿರಬಹುದು.
 ಕ್ಯಾನ್ಸರ್ ಅನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಹಚ್ಚಿದಾಗ ಉತ್ತಮ ಚಿಕಿತ್ಸೆಯನ್ನು ರೋಗಿಗೆ ನೀಡಬಹುದು. ಹಾಗೂ  ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಮತ್ತು ಚಿಕಿತ್ಸೆಯ ನಂತರ ದೀರ್ಘಕಾಲ ಬದುಕುಳಿಯುವ ಅವಧಿಯನ್ನು ಹೊಂದಬಹುದು ಎಂದು ತಿಳಿಸಿದರು. ಕ್ಯಾನ್ಸರ್ ಕಾಯಿಲೆಗೆ ನೀಡುವ ಹಲವು ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ದಂತ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ.ಕೇದಾರನಾಥ್ ಅವರು ಮಾತನಾಡಿ ಭಾರತದಲ್ಲಿ ಬಾಯಿಯ ಕ್ಯಾನ್ಸರ್‍ಗಳ ಬಗ್ಗೆ ಮಾಹಿತಿ ನೀಡಿದರು. ತಂಬಾಕು ಸೇವನೆಯಿಂದ ಭಾರತದಲ್ಲಿ ಬಾಯಿಯ ಕ್ಯಾನ್ಸರ್ ಅನ್ನು ಹೆಚ್ಚಾಗಿ ಕಾಣಬಹುದು,  ಮತ್ತು ಕ್ಯಾನ್ಸರ್ ಪ್ರಮಾಣವು ಕಡಿಮೆಯಾಗಲು ತಂಬಾಕು ಸೇವನೆಯಿಂದ ದೂರ ಇರಬೇಕು ಎಂದರು. 
 ಕಿವಿ, ಮೂಗು ಮತ್ತು ಗಂಟಲು ಮುಖ್ಯಸ್ಥರಾದ ಡಾ.ಶ್ವೇತ ಅವರು ಕಿವಿ, ಮೂಗು ಮತ್ತು ಗಂಟಲಿನ ಕ್ಯಾನ್ಸರ್ ರೋಗ ಲಕ್ಷಣಗಳ ಬಗ್ಗೆ ಮಾತನಾಡಿದರು. 2 ವಾರಕ್ಕಿಂತ ಹೆಚ್ಚಾಗಿ ಧ್ವನಿಯಲ್ಲಿ ಬದಲಾವಣೆ, ಕತ್ತಿನಲ್ಲಿ ಗಡ್ಡೆ, ನುಂಗಲು ತೊಂದರೆ ಕಾಣಿಸಿದರೆ ಹಾಗೂ ಮೂಗು ಮತ್ತು ಕಿವಿಯಲ್ಲಿ ರಕ್ತವು ಸ್ರವಿಸುವುದು ಕ್ಯಾನ್ಸರ್ ರೋಗ ಲಕ್ಷಣಗಳಾಗಿರಬಹುದೆಂದು ತಿಳಿಸಿದರು. 
ಇಂತಹ ರೋಗ ಲಕ್ಷಣವಿದ್ದರೆ ಅತಂಹವರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದರೆ ಪ್ರಥಮ ಹಂತದಲ್ಲೇ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಹುದು. ಹಾಗೂ ಕ್ಯಾನ್ಸರ್ ಹೊರಹಾಕಲು ಉನ್ನತ ಚಿಕಿತ್ಸೆ ನೀಡಬಹುದು.
ತಂಬಾಕು ಮತ್ತು ಮದ್ಯ ಸೇವನೆ ಮಾತ್ರವಲ್ಲದೆ ಬದಲಾಗುತ್ತಿರುವ ಜೀವನ ಶೈಲಿ ಮತ್ತು ಆಹಾರದಲ್ಲಿ ವಿವಿಧ ರಾಸಾಯನಿಕಗಳ ಹೆಚ್ಚಿದ ಸೇವನೆಯು ಕ್ಯಾನ್ಸರ್‍ಗೆ ಮುಖ್ಯ ಕಾರಣವಾಗುವ ಅಂಶವಾಗಿದೆ ಎಂದು ತಿಳಿಸಿದರು.
 ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರು ಮತ್ತು ಸಾರ್ವಜನಿಕರನ್ನು ಡಾ.ಮಹಿಮೇಶ್, ಹೌಸ್ ಸರ್ಜನ್‍ರವರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments