Webdunia - Bharat's app for daily news and videos

Install App

ಮಡಕಶಿರವನ್ನು ಗಡಿನಾಡು ಪ್ರದೇಶವೆಂದು ಘೋಷಿಸಿ ಎಂದು ಒತ್ತಾಯ: ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ

Webdunia
ಭಾನುವಾರ, 1 ಆಗಸ್ಟ್ 2021 (19:03 IST)
ಬೆಂಗಳೂರು: ನಗರದ ಗಡಿನಾಡು ಕನ್ನಡಿಗರ ಸಮಿತಿ
ಮಡಕಶಿರವನ್ನು ಗಡಿನಾಡು ಪ್ರದೇಶವೆಂದು ಘೋಷಿಸಲು ಮನವಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭಾರಣ ರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
 
ಮಡಕಶಿರ, ಆಂಧ್ರಪ್ರದೇಶದಲ್ಲಿ ಅಡಗಿರುವ ಅಪ್ಪಟ ಕನ್ನಡ ನಾಡಿನ ಒಂದು ದ್ವೀಪ, ಮಡಕಶಿರ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಗುರುತಿಸಲಾಗದಿರುವ ಒಂದು ಕನ್ನಡನಾಡು, ಇದು ಕರ್ನಾಟಕದಲ್ಲಿ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಗಡಿ ಹಂಚಿಕೊಂಡಿದೆ ಮತ್ತು ಕನ್ನಡದ ಖ್ಯಾತ ವ್ಯಕ್ತಿಗಳಾದ ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ಡಾ. ಹೆಚ್. ನರಸಿಂಹಯ್ಯನವರ ಊರಿನ ಗಡಿ ಭಾಗದಲ್ಲಿರುವುದು ಗಮನಾರ್ಹ. ಈ ಕ್ಷೇತ್ರ 1956ಕ್ಕಿಂತ ಮುಂಚೆ ಮೈಸೂರು ರಾಜ್ಯದ ಭಾಗವಾಗಿತ್ತು, ಇಲ್ಲಿ ಸುಮಾರು 80ರಿಂದ 90% ರಷ್ಟು ಜನರು ಕನ್ನಡ ಮಾತನಾಡುತ್ತಾರೆ. ಶಾಲೆಗಳಲ್ಲಿ ತೆಲುಗಿನಲ್ಲಿ ಬೋಧನೆ ಮಾಡಿದರೂ ಪ್ರಾಯೋಗಿಕ ಅಭ್ಯಾಸಗಳು ಮಾತ್ರ ಕನ್ನಡ ಭಾಷೆಯಲ್ಲಿ ನಡೆಸುತ್ತಾರೆ. ಇವರಿಗೆ ಸಂಬಂಧಗಳು, ವ್ಯವಹಾರಗಳು ಎಲ್ಲವೂ ಕರ್ನಾಟಕ ದಲ್ಲಿಯೇ ನಡೆಯುತ್ತಾ ಇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 
 
ಮಡಕಶಿರ ಮೈಸೂರು ರಾಜ್ಯ ತೊರೆದು ಆಂಧ್ರದಲ್ಲಿ ಸೇರಿ ಸುಮಾರು 70 ವರ್ಷವಾದರೂ ಇಲ್ಲಿನ ಜನರಿಗೆ ಕನ್ನಡ ಭಾಷೆಯೇ ಜೀವನಾಡಿಯಾಗಿರುತ್ತದೆ. ಇಲ್ಲಿ ಹಲವಾರು ವರ್ಷಗಳಿಂದ ಕನ್ನಡ ಅಕಾಡೆಮಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು, ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿರುವುದರಿಂದ ಸುಮಾರು ಕನ್ನಡ ಶಾಲೆಗಳನ್ನು ಅಂಧ್ರ ಸರ್ಕಾರ ಮುಚ್ಚಿಹಾಕಲಾಗಿದೆ. ಸುಮಾರು ದಶಕಗಳಿಂದ ಮಡಕಶಿರ ಕ್ಷೇತ್ರದ ಜನರು ಕರ್ನಾಟಕದ ಗಡಿಯಲ್ಲಿ ವಾಸಿಸುತ್ತಾ, ಗಡಿನಾಡು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
 
ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ನಗರಗಳಲ್ಲಿ ಉದ್ಯೋಗಕ್ಕಾಗಿ ವಲಸೆ ಹೋಗಿ ಮಡಕಶಿರ ಕ್ಷೇತ್ರದ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ಈ ನಗರಗಳಲ್ಲಿ ಉತ್ತಮ ವಿದ್ಯಾಭ್ಯಾಸಕ್ಕಾಗಿ ವಲಸೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ನಂತರ ಸರ್ಕಾರಿ ಉದ್ಯೋಗಗಳಿಗೆ ಸರ್ಕಾರ ನಿಯಮಗಳಿಂದ ಅನರ್ಹರಾಗುತ್ತಿದ್ದಾರೆ. ಸುಮಾರು 50 ವರ್ಷಗಳಿಂದ ಮಡಕಶಿರ ಜನರು ಗಡಿನಾಡು ಮೀಸಲಾತಿಗೋಸ್ಕರ ಹೊರಾಟ ಮಾಡುತ್ತಿದ್ದಾರೆ. ಹಲವು ಸರ್ಕಾರಗಳಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
 
 
ಆದರೆ ಕೇರಳ ರಾಷ್ಟ್ರದಲ್ಲಿ ಇರುವ ಕಾಸರಗೋಡು ಪ್ರದೇಶಕ್ಕೆ ಹೋರಾಟ ಮಾಡಿದ್ದಕ್ಕೆ, ಕರ್ನಾಟಕ ಸರ್ಕಾರ ಗಡಿನಾಡು ಮೀಸಲಾತಿ ಕಲ್ಪಿಸಿದ್ದಾರೆ. ಮಡಕಶಿರ ಕ್ಷೇತ್ರ ಮೈಸೂರು ರಾಜ್ಯದಲ್ಲಿ ಅಂತರ್ಭಾಗವಾಗಿದ್ದರೂ, ಕರ್ನಾಟಕ ಸರ್ಕಾರದಿಂದ ಗಡಿನಾಡು ಮೀಸಲಾತಿ ಇಲ್ಲದೆ ಜನರು ಕಷ್ಟಪಡುತ್ತಿದ್ದಾರೆ. ಅದಕ್ಕಾಗಿ ಎಲ್ಲಾ ಮಡಕಶಿರ ಜನರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡುವುದೇನೆಂದರೆ ಈ ಕ್ಷೇತ್ರವನ್ನು ಗಮನ ಹರಿಸಿ ಕನ್ನಡ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾಗಿ ಮತ್ತು ಈ ಕ್ಷೇತ್ರವನ್ನ ಗಡಿನಾಡು ಕನ್ನಡ ಪ್ರದೇಶವೆಂದು ಘೋಷಿಸಬೇಕೆಂದು ವಿನಂತಿಸುತ್ತೇವೆ ಎಂದಿದ್ದಾರೆ.
 
 
ಪ್ರೊ. ಬರಗೂರು ರಾಮಚಂದ್ರಪ್ಪನವರ ಗಡಿನಾಡು ಅಧ್ಯಯನ ವರದಿ ತಿಳಿಸುವ ಪ್ರಕಾರ ಮಡಕಶಿರ ಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪಡಿಸುವ ಕಾರ್ಯಗಳು:
 
ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿರುವುದರಿಂದ ಕನಿಷ್ಟ ಹೋಬಳಿಗೊಂದರಂತೆ ಕನ್ನಡ ಮಾಧ್ಯಮ ವಸತಿ ಶಾಲೆಗಳುನ್ನು ತೆರೆಯುವುದು.
 
ಗಡಿ ನಾಡಿನಲ್ಲಿ ಕನ್ನಡ ಮಾಧ್ಯಮ ಮತ್ತು ಶಿಕ್ಷಣವನ್ನು ವಿಸ್ತರಿಸುವ ದೃಷ್ಟಿಯಿಂದ 'ಗಡಿನಾಡು ಶಿಕ್ಷಣ ನಿರ್ದೇಶನಾಲಯ' ವನ್ನು ಸ್ಥಾಪಿಸುವುದು.
 
ಮಡಕಶಿರ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದು. 
 
ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಮತ್ತು ಉಳಿಸುವುದಕ್ಕಾಗಿ ಕನ್ನಡ ಕಾರ್ಯಕ್ರಮಗಳನ್ನು
ಆಯೋಜಿಸುವುದು.
kannada Development Authority

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments