Select Your Language

Notifications

webdunia
webdunia
webdunia
webdunia

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಆಪರೇಷನ್ ಕಮಲದ ಆಡಿಯೋ ರಿಲೀಸ್ ಮಾಡಿದ ಸಿಎಂ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಆಪರೇಷನ್ ಕಮಲದ  ಆಡಿಯೋ ರಿಲೀಸ್ ಮಾಡಿದ ಸಿಎಂ
ಬೆಂಗಳೂರು , ಶುಕ್ರವಾರ, 8 ಫೆಬ್ರವರಿ 2019 (12:14 IST)
ಬೆಂಗಳೂರು : ಬಜೆಟ್ ಮಂಡನೆಗೂ ಮುನ್ನ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು  ನಡೆಸಿದ ಸುದ್ದಿಗೋಷ್ಠಿಯಲ್ಲಿ  ಬಿಜೆಪಿ ಆಪರೇಷನ್ ಕಮಲದ  ಆಡಿಯೋ ರಿಲೀಸ್ ಮಾಡಿ ಬಿಜೆಪಿಗೆ ಶಾಕ್ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ  ಸಿಎಂ ಹೆಚ್.ಡಿ ಕುಮಾರಸ್ವಾಮಿ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡರ ಪುತ್ರ ಶರಣಗೌಡ ಅವರಿಗೆ ಆಮಿಷವೊಡ್ಡಿ ಯಡಿಯೂರಪ್ಪ ಮಾತನಾಡಿರುವ ಮೊಬೈಲ್ ರೆಕಾರ್ಡಿಂಗ್ ಅನ್ನು ಸಿಎಂ ಹೆಚ್.ಡಿಕೆ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋದಲ್ಲಿ ಜೆಡಿಎಸ್ ತೊರೆದರೆ ನಾಗನಗೌಡರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಾರೆನ್ನಲಾಗಿದೆ.

ಅಲ್ಲದೇ ‘ಆಪರೇಷನ್ ಕಮಲ ಬಿಜೆಪಿಯ ಹುಟ್ಟುಗುಣ, ನಮ್ಮ ಸರ್ಕಾರವನ್ನು ಟೀಕಿಸಿ, ಗಲಾಟೆಯೆಬ್ಬಿಸಿ ಆದರೆ, ಬಜೆಟ್ ಮಂಡಣೆ ಮಾಡಲು ಅವಕಾಶ ನೀಡದಿದ್ದರೆ ರಾಜ್ಯದ ಜನರಿಗೆ ತೊಂದರೆಯಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಿಜೆಪಿಗೆ ಕಿಂಚಿತ್ತಾದರೂ ಗೌರವ ಇದ್ದರೆ ಇಂತಹ ವರ್ತನೆಯನ್ನು ಬದಿಗಿಡಬೇಕು ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನಿಕಾ-ಹಲಾಲ್ ಗೆ ಬಲವಂತಪಡಿಸಿದ ಪತಿಯ ವಿರುದ್ಧ ದೂರು ದಾಖಲಿಸಿದ ಮಹಿಳೆ