ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪ್ಲೇಕ್ಸ್, ಬ್ಯಾನರ್ ಹೋರ್ಡಿಂಗ್ಸ್ ಗಳನ್ನು ಹಾಕಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡುವುದರ ಮೂಲಕ ಜಾಹೀರಾತು ಕಂಪನಿಗಳಿಗೆ ಸಿಹಿಸುದ್ಧಿಯನ್ನು ನೀಡಿದೆ.
									
			
			 
 			
 
 			
					
			        							
								
																	
ಹೈಕೋರ್ಟ್ ಹಿಂದಿನ ಮುಖ್ಯ ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ತೆರವು ಮಾಡಲು ಆದೇಶಿಸಿದ ಹಿನ್ನಲೆಯಲ್ಲಿ  2018 ರ ಅಗಸ್ಟ್ 6 ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ 1 ವರ್ಷಗಳ ಕಾಲ ಫ್ಲೇಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಗಳಿಗೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಜಾಹೀರಾತು ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.
									
										
								
																	
ಇದೀಗ ಈ ಬಗ್ಗೆ ಸುಧೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಬಿಬಿಎಂಪಿ ನಿರ್ಣಯವನ್ನು ರದ್ದು ಪಡಿಸಿ ಬಿಬಿಎಂಪಿಯ ಅಧಿಕೃತ ಬೋರ್ಡ್ ಗಳಲ್ಲಿ ಮಾತ್ರ ಫ್ಲೆಕ್ಸ್, ಬ್ಯಾನರ್ ಹಾಗೂ ಹೋರ್ಡಿಂಗ್ಸ್ ಹಾಕಬೇಕೇ ಹೊರತು, ಎಲ್ಲೆಂದರಲ್ಲಿ ಹಾಕುವಂತಿಲ್ಲ ಎಂದು ಹೇಳಿದೆ.
									
											
							                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.