ಪಾರ್ಶ್ವವಾಯು ಸಮಸ್ಯೆಯಿಂದ ಬೇಗ ಗುಣಮುಖರಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ

ಗುರುವಾರ, 7 ಫೆಬ್ರವರಿ 2019 (05:38 IST)
ಬೆಂಗಳೂರು : ವಯಸ್ಸಾದ ನಂತರ ಕೆಲವರಿಗೆ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರು ಕೈಕಾಲಿನ ಸ್ವಾದೀನ ಕಳೆದುಕೊಂಡು ಬೇರೆಯವರ ಮೇಲೆ ಅಲಂಬಿತರಾಗುತ್ತಾರೆ. ಈ ಪಾರ್ಶ್ವವಾಯು ಸಮಸ್ಯೆಯನ್ನು ಮನೆಮದ್ದಿನಿಂದಲೂ ಕೂಡ ಬಹಳ ಬೇಗ ಗುಣಪಡಿಸಬಹುದು.


ಒಣಶುಂಠಿ ಕ್ಲೀನ್ ಮಾಡಿ ಹುರಿದು ಪುಡಿಮಾಡಿಕೊಂಡು ಅದನ್ನು ಬಟ್ಟೆಯಲ್ಲಿ ಸೋಸಬೇಕು. ಅದರಿಂದ 20ಗ್ರಾಂನಷ್ಟು ಪುಡಿ ತೆಗೆದುಕೊಳ್ಳಿ. ನಂತರ ಕಪ್ಪು ಜೀರಿಗೆ  ತೆಗೆದುಕೊಂಡು ಹುರಿದು ಪುಡಿಮಾಡಿಕೊಂಡು ಅದನ್ನು ಬಟ್ಟೆಯಲ್ಲಿ ಸೋಸಬೇಕು.


ಅದರಿಂದ 20ಗ್ರಾಂನಷ್ಟು ಪುಡಿ ತೆಗೆದುಕೊಳ್ಳಿ. ನಂತರ ಬಜೆ  ತೆಗೆದುಕೊಂಡು ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಅದನ್ನು ಜಜ್ಜಿ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದನ್ನು ಪುಡಿ ಮಾಡಿ ಅದನ್ನು ಕೂಡ ಬಟ್ಟೆಯಲ್ಲಿ ಸೋಸಬೇಕು. ಅದರಿಂದ 40ಗ್ರಾಂನಷ್ಟು ಪುಡಿ ತೆಗೆದುಕೊಳ್ಳಿ. ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ.


ಇದನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ 3ಗ್ರಾಂ (1 ಚಿಟಿಕೆ) ನಷ್ಟು ಪುಡಿಯನ್ನು ಜೇನುತುಪ್ಪದ ಜೊತೆ ಮಿಕ್ಸ್ ಮಾಡಿ ತಿನ್ನಿ. ಇದರ ಜೊತೆ ಡಾಕ್ಷರ್ ನೀಡಿರುವ ಮೆಡಿಸಿನ್ ಕೂಡ ತಿನ್ನಬೇಕು. ಹೀಗೆ ಮಾಡಿದರೆ 3 ತಿಂಗಳಲ್ಲಿ ನಿಮ್ಮ ಪಾರ್ಶ್ವವಾಯು ಸಮಸ್ಯೆ ದೂರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎದೆಹಾಲು ಉತ್ಪತ್ತಿಯಾಗಲು ಬಾಣಂತಿಯರು ಈ ಮನೆಮದ್ದನ್ನು ಬಳಸಿ