Publish Date: Sun, 11 Oct 2020 (21:44 IST)
Updated Date: Sun, 11 Oct 2020 (21:46 IST)
ರಾಜ್ಯದಲ್ಲಿ ಎದುರಾಗಿರುವ ಉಪ ಚುನಾವಣೆಯಲ್ಲಿ ಗೆಲುವಿನ ರಣತಂತ್ರಕ್ಕೆ ಕೈ ಪಡೆ ಮೊರೆ ಹೋಗಿದೆ.
ಈ ನಡುವೆ ಕಾಂಗ್ರೆಸ್ ಪದಾಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಕೊಟ್ಟಿದ್ದು, ಕ್ಷೇತ್ರಗಳ ಕೆಲಸ ವಹಿಸಿಕೊಂಡವರು ಕೂಡಲೇ ಕಾರ್ಯ ಶುರು ಮಾಡಬೇಕೆಂದು ಹೇಳಿದ್ದಾರೆ.
ಆರ್ ಆರ್ ನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ವೇಳೆ ವಿಶೇಷವಾಗಿರಬೇಕು ಎಂದಿದ್ದಾರೆ.
ಇನ್ನು, ಆರ್ ಆರ್ ನಗರದಲ್ಲಿ ಅ. 14 ಕ್ಕೆ ಹಾಗೂ ಶಿರಾದಲ್ಲಿಅ.15 ರಂದು ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.