Select Your Language

Notifications

webdunia
webdunia
webdunia
webdunia

ಅಭ್ಯರ್ಥಿ ಹೆಸರು ಮತ್ತೆ ಘೋಷಿಸಿದ ಬಿಎಸ್‌ವೈ, ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ

ಅಭ್ಯರ್ಥಿ ಹೆಸರು ಮತ್ತೆ ಘೋಷಿಸಿದ ಬಿಎಸ್‌ವೈ, ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ
ಹಾವೇರಿ , ಭಾನುವಾರ, 24 ಡಿಸೆಂಬರ್ 2017 (14:44 IST)
ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಎಂದು ಅವರ ಹೆಸರು ಘೋಷಣೆ ಮಾಡಿದ್ದರಿಂದ ಶಿಗ್ಗಾವಿಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. 
 
ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಆಕಾಂಕ್ಷಿಯಾಗಿದ್ದು, ಅಲ್ಲದೇ ಬಸವರಾಜ್ ಬೊಮ್ಮಾಯಿ ಮತ್ತು ತಮ್ಮ ನಡುವೆ 2008ರಲ್ಲಿ ಮಾತುಕತೆಯಾಗಿತ್ತು. ಅದರಂತೆ ಬಸವರಾಜ್ ಬೊಮ್ಮಾಯಿ, ಶಿಗ್ಗಾವಿ ಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧಿಸಬೇಕು ಎಂದು ಹೇಳಿದ್ದಾರೆ.
 
ಶಿಗ್ಗಾವಿ ಕ್ಷೇತ್ರದಲ್ಲಿ ಬಸವರಾಜ್ ಬೊಮ್ಮಾಯಿ ಬದಲಾಗಿ ತಮಗೆ ಟಿಕೆಟ್ ನೀಡಬೇಕೆಂದು ಸೋಮಣ್ಣ ಬೇವಿನಮರದ ಒತ್ತಾಯಿಸಿದ್ದಾರೆ. ಅವಕಾಶ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಜನರೊಂದಿಗೆ ಚರ್ಚಿಸಲಾಗುವುದು ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮದುವೆಯಾದ ಎಚ್.ಡಿ.ರೇವಣ್ಣ, ಕಾರಣ ಗೊತ್ತಾ?