Publish Date: Sat, 23 Dec 2017 (16:06 IST)
Updated Date: Sat, 23 Dec 2017 (16:08 IST)
ಮಹಾದಾಯಿ ವಿವಾದದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಗೋವಾಕ್ಕೆ ಹೋಗಿ ಮಾತುಕತೆ ನಡೆಸಬೇಕು ಎಂದು ಸಂಸದ ಸುರೇಶ ಅಂಗಡಿ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷಗಳ ನಂತರ ಯಡಿಯೂರಪ್ಪ ಅವರ ಪ್ರಯತ್ನದಿಂದ ಗೋವಾ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದ್ದರಿಂದ ಸಚಿವ ಎಂ.ಬಿ.ಪಾಟೀಲ್ ಅವರು ಯಡಿಯೂರಪ್ಪ ಅವರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಮಹದಾಯಿ ನೀರು ಬಿಡಲು ಗೋವಾ ಸರಕಾರವನ್ನು ಯಡಿಯೂರಪ್ಪ ಒಪ್ಪಿಸಿದರೂ ರಾಜ್ಯ ಕಾಂಗ್ರೆಸ್ ಕೃತಜ್ಞತೆ ತಿಳಿಸಿಲ್ಲ. ಬದಲಾಗಿ ಆರೋಪ ಮಾಡುತ್ತಿದೆ. ಸೋನಿಯಾಗಾಂಧಿ ಅವರು ಈ ಹಿಂದೆ ಕರ್ನಾಟಕಕ್ಕೆ ಮಹದಾಯಿಯ ಒಂದು ಹನಿ ನೀರು ಕೊಡಬೇಡಿ ಎಂದಿದ್ದರು. ಆದ್ದರಿಂದ ಗೋವಾ ಕಾಂಗ್ರೆಸ್ ನೀರು ಬಿಡಲು ಆಕ್ಷೇಪ ಮಾಡುತ್ತಿದೆ ಎಂದು ದೂರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.