Daily Horoscope

Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರ ಅಗತ್ಯ ಕ್ರಮಕೈಗೊಂಡರೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡೋದು ಯಾಕೆ: ವಿಜಯೇಂದ್ರ

BY Vijayendra
ಬೆಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಂಡಿದೆ. ಆದರೂ ಕಾಂಗ್ರೆಸ್ ಪರಿಸ್ಥಿತಿಯನ್ನು ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು  ದುರುಪಯೋಗಪಡಿಸಿಕೊಳ್ಳಲು ಹೊರಟಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ. 
 
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಗೊತ್ತಾದ ಕೂಡಲೇ ಕೇಂದ್ರ ಸರ್ಕಾರ ಯಾವುದನ್ನೂ ಮುಚ್ಚಿಡಲಿಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಅವರು ತನಿಖೆಗೆ ಆದೇಶ ಮಾಡಿದರು. ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಂಡ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ  ಮೋದಿ ಅವರು ಅಗತ್ಯ ಕ್ರಮ ಕೈಗೊಂಡರು. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ರಾತ್ರೋರಾತ್ರಿ 13 ಜನರ ಬಂಧಿಸಲಾಗಿದೆ. ಆದರೂ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜತೆ ಸೇರಿ ಕಾಂಗ್ರೆಸ್ ಈಗ ಪ್ರತಿಭಟನೆ ನಾಟಕ ಮಾಡುತ್ತಿದೆ ಎಂದು ತಿಳಿಸಿದರು.  
 
ದೇಶದ ಭವಿಷ್ಯ ಯುವ ಜನತೆ ಭವಿಷ್ಯ ಎಂದು ಮೋದಿ ಅವರು ತಿಳಿದಿದ್ದಾರೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚು ಆದ್ಯತೆಯನ್ನು ಹಿಂದಿನಿಂದ ನೀಡ್ತಾ ಇದ್ದಾರೆ. ಎಲ್ಲ ಗೊಂದಲಕ್ಕೆ ತೆರೆ ಎಳೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೂ ಈಗ ಸಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನೀಟ್ ಪ್ರಕರಣದ ತನಿಖೆಗೆ ಮೋದಿ ಅವರು ಐದು ತ್ವರಿತಗತಿ ನ್ಯಾಯಾಲಯ ಸ್ಥಾಪನೆಗೆ ಆದೇಶ ಮಾಡಿದ್ದಾರೆ. ತಪ್ಪಿತಸ್ಥರಿಗೆ ಆದಷ್ಟು ಬೇಗ ಶಿಕ್ಷೆ ಆಗಲು ಈ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು. 
 
ನೀಟ್ ನಡೆಸಲು ಆರು ತಿಂಗಳು ತಯಾರಿ ಬೇಕು. ಅಂತಹುದರಲ್ಲಿ ಕೇಂದ್ರ ಸರ್ಕಾರ ಕೇವಲ ಮೂವತ್ತೈದು ದಿನದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಮರುಪರೀಕ್ಷೆ ಮಾಡಿ 25 ದಿನದಲ್ಲಿ ಫಲಿತಾಶ ಘೋಷಣೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಪರೀಕ್ಷೆಯಲ್ಲಿ  ಗೊಂದಲ ಆಗಬಾರದು ಎಂದು ಕಂಪ್ಯೂಟರ್ ಮೂಲಕ ನಡೆಸಲು, ಕೃತಕ ಬುದ್ಧಿಮತ್ತೆ ಬಳಸಲು, ಪರೀಕ್ಷೆ ನಿಗಾಕ್ಕೆ ಅತ್ಯಾಧುನಿಕ ಕ್ರಮಗಳಿಗೆ ಕೇಂದ್ರ ಮುಂದಾಗಿದೆ. ಒಟ್ಟಾರೆ ಪರೀಕ್ಷೆಗೆ ಹೆಚ್ಚು ರಕ್ಷಣೆ ದೊರೆತು ಪಾರದರ್ಶಕವಾಗಿ ನಡೆಯಲು ಅನೇಕ ಕ್ರಮ ಕೈಗೊಂಡಿದೆ. ಇμÁ್ಟದರೂ ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ನಡೆಸುವುದು ಏಕೆ ಎಂದು ಕೇಳಿದರು. 
 
ದೆಹಲಿಯ  ಜಂತರ್ ಮಂತರ್‍ನಲ್ಲಿ ಸಿಜೆಪಿ ನೇತೃತ್ವದಲ್ಲಿ ಧರಣಿ, ಹೋರಾಟ, ಪ್ರತಿಭಟನೆ ನಡೆಯುತ್ತಿದೆ. ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡ್ತಾ ಇದ್ದಾರೆ. ಕೇಂದ್ರ ಸರ್ಕಾರ  ಪ್ರತಿಭಟನೆಗೆ ಯಾವುದೇ ರೀತಿ ಅಡ್ಡಿ  ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. 
 
ರಾಹುಲ್ ಗಾಂಧಿ ಅವರು ಹದಿನೈದು ಇಪ್ಪತ್ತು ದಿನ ವಿದೇಶದಲ್ಲಿದ್ದರು. ಆಗ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರಲಿಲ್ಲ. ಸ್ವದೇಶಕ್ಕೆ ಬಂದ ಕೂಡಲೇ ಅವರಿಗೆ ಕಾಳಜಿ ಉಕ್ಕಿ ಹರಿಯುತ್ತಿದೆ. ಭಾರತಕ್ಕೆ ಬಂದ ಕೂಡಲೇ ಹೈ ಸೆಕ್ಯೂರಿಟಿ ಇವರು ಪ್ರಧಾನಿ ನಿವಾಸದ ಬಳಿ ಧರಣಿ ಮಾಡ್ತಾರೆ ಎಂದರು. 
 
ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು, ಈಗಾಗಲೇ ಸಿಜೆಪಿ ನಿಯೋಗÀದೊಂದಿಗೆ ಮಾತನಾಡಿದ್ದಾರೆ. ಅವರ ಅಪೇಕ್ಷೆ, ನಿರೀಕ್ಷೆ ಎಂದು ತಿಳಿದಿದ್ದಾರೆ. ಕೇಂದ್ರ ಸಚಿವರ ರಾಜೀನಾಮೆ ಪಡೆದರೆ ಮಾತ್ರ ಉತ್ತರ ಕಂಡುಕೊಳ್ಳಲು ಆಗದು. ಸಂಸತ್ತಿನಲ್ಲಿ ನೀಟ್ ಕುರಿತು ಚರ್ಚೆ ಆಗಬೇಕು. ಅದಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ. ಎಷ್ಟು ಗಂಟೆಗಳ ಕಾಲ ಬೇಕಾದರೂ ಚರ್ಚೆಗೆ ಸರ್ಕಾರ ತಯಾರಿದೆ. ಇಷ್ಟೆಲ್ಲಾ ಹೇಳಿದ ಮೇಲೂ ರಾಹುಲ್ ಗಾಂಧಿ ಅವರು ಪ್ರತಿಭಟನೆ ನಡೆಸುವುದು ಏಕೆ ಎಂದರು. 
 
ಕಾಂಗ್ರೆಸ್ ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ. ಧಾರವಾಡದಲ್ಲಿ ಉದ್ಯೋಗಕ್ಕಾಗಿ ಯುವಕರು ಭಾರಿ ಪ್ರತಿಭಟನೆ ಮಾಡಿದಾಗ ರಾಜ್ಯ ಸರ್ಕಾರ ಅವರ ಮೇಲೆ ಲಾಠಿ ಪ್ರಹಾರ ಮಾಡಿತು. ಚಿನ್ನಸ್ವಾಮಿ ಸ್ಟೇಡಿಯಂ ಕಾಳ್ತುಳಿತದಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಾಗ ಸರ್ಕಾರ ಜವಾಬ್ದಾರಿ ಹೊರದೆ ಅಧಿಕಾರಿಗಳ ಮೇಲೆ ಹೊಣೆ ಹೊರಿಸಿ ಕೈ ತೊಳೆದುಕೊಂಡಿತು. ಆಗೆಲ್ಲ  ಮಾತನಾಡದ ರಾಹುಲ್ ಗಾಂಧಿ ಅವರು ಈಗ ಮೋದಿ ಅವರ ನಿಯತ್ತಿನ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದರು.   
 
ಎನ್‍ಡಿಎ ಅಧಿಕಾರದಲ್ಲಿ ಎಂಬಿಬಿಎಸ್ ಸೀಟ್, ಮೆಡಿಕಲ್ ಕಾಲೇಜು, ವೈದ್ಯಕೀಯ ಪಿಜಿ ಸೀಟುಗಳು, ಐಐಟಿ ಹಾಗೂ ಐಐಎಂ ಸೀಟುಗಳು ಹೆಚ್ಚಳವಾಗಿವೆ. ಯುವಜನತೆಯ ಭವಿದ್ಯ ರೂಪಿಸಲು ಮೋದಿ ಅವರು ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಇದನ್ನೆಲ್ಲ ನೋಡದ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ಮಾಡುತ್ತಿದೆ ಎಂದು ದೂರಿದರು.  ರಾಹುಲ್ ಗಾಂಧಿ ಅವರು, ಮೋದಿ ಅವರ ಮನೆ ಮುಂದೆ ಕೂತು ನಾಟಕ ಆಡುವ ಬದಲು ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿ. ಚರ್ಚೆ ಮಾಡಿ. ಆಗ ಉತ್ತರ ಸಿಗಲಿದೆ. ಇದನ್ನೆಲ್ಲ ಬಿಜೆಪಿ ವಿರೋಧಿಸಲಿದೆ ಎಂದರು. 
 
ಗಲಭೆಯಲ್ಲಿ ಪೊಲೀಸರ ಮೇಲೆ, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಆಗಿದೆ. ಇದನ್ನು ವಿದ್ಯಾರ್ಥಿಗಳು ಮಾಡಲು ಸಾಧ್ಯವಿಲ್ಲ. ಸಮಯ ದುರುಪಯೋಗಪಡಿಸಿಕೊಂಡು ಗೂಂಡಾಗಳನ್ನು ಬಿಟ್ಟು ಶ್ರೀಲಂಕಾ, ನೇಪಾಳದಲ್ಲಿ ಅರಾಜಕತೆ ಸೃಷ್ಟಿ ಮಾಡಿದಂತೆ ಮಾಡಲು ಸಂಚು ನಡೆಸಿತ್ತು. ತುಕ್ಡೆ ಗ್ಯಾಂಗ್‍ಗಳ ಕೃತ್ಯವನ್ನು ಖಂಡಿಸಲಾಗುವುದು ಎಂದರು. 
 
ನಿನ್ನೆ ನಡೆದ ಪ್ರತಿಭಟನೆ ಸಂಬಂಧ ಪೆÇಲೀಸ್ ಆಯುಕ್ತರು ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸುವುದನ್ನು ಬಿಡಿ. ಯಾರು ಗೂಂಡಾಗಳು ಇದ್ದಾರೆ ಅವರನ್ನು ಒದ್ದು ಒಳಗೆ ಹಾಕಿ. ನಮಗೆ ಉಪದೇಶ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. 
 
 

Share this Story:

Follow Webdunia kannada

ಮುಂದಿನ ಸುದ್ದಿ

ಯುವಜನರಿಗೆ ಪರಿಹಾರಗಿಂತ ಪ್ರತಿಭಟನೆ ನಡೆಸುವುದರಲ್ಲೇ ಹೆಚ್ಚು ಆಸಕ್ತಿ: ನಿರ್ಮಲಾ ಸೀತಾರಾಮನ್