ಬೆಂಗಳೂರು: ನಾನೇನಾದ್ರೂ ಹೀಗಿದ್ರೆ ರಾಜ್ಯಾಧ್ಯಕ್ಷನಾಗಲು ನಾಲಾಯಕ್ ಎಂದು ನಾನೇ ಹೇಳಿಕೊಳ್ಳುತ್ತೇನೆ.. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬಳಿಕ ಇಂದು ಅವರು ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಯತ್ನಾಳ್ ಉಚ್ಛಾಟನೆ ಬೆನ್ನಲ್ಲೇ ಕೆಲವರು ಸಂಭ್ರಮಾಚರಣೆ ಮಾಡಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಯತ್ನಾಳ್ ಉಚ್ಛಾಟನೆ ಮಾಡಿದ್ದಕ್ಕೆ ವಿಜಯೇಂದ್ರರೇ ಸಂಭ್ರಮಾಚರಣೆ ಮಾಡಿದ್ದಾರೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು ಹಾಗೇನಾದ್ರೂ ಮಾಡಿದ್ದು ನಾನೇ ಎಂದರೆ ರಾಜ್ಯಾದ್ಯಕ್ಷನಾಗಲು ನಾಲಾಯಾಕ್ ಎಂದು ನಾನೇ ಹೇಳುತ್ತೇನೆ ಎಂದಿದ್ದಾರೆ.
ಒಬ್ಬ ರಾಜ್ಯಾಧ್ಯಕ್ಷನಾಗಿ ಕಳೆದ ಒಂದು ವರ್ಷದಿಂದ ನಾನು ತಾಳ್ಮೆಯಿಂದ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿಯಾಗುವುದು ನನ್ನ ಗುರಿ ಅಲ್ಲ. ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಜವಾಬ್ಧಾರಿಯನ್ನು ವರಿಷ್ಠರು ನೀಡಿದ್ದಾರೆ. ಅದನ್ನು ತಲುಪುವುದೇ ನಮ್ಮ ಗುರಿ. ಮುಖ್ಯಮಂತ್ರಿಯಾಗುವ ಮಹ್ವಾಕಾಂಕ್ಷೆಯಿಂದ ನಾನು ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.