Select Your Language

Notifications

webdunia
webdunia
webdunia
webdunia

ಉಪ ಚುನಾವಣೆ ಫಲಿತಾಂಶ: ಬಸವರಾಜ ಬೊಮ್ಮಾಯಿ ಹೇಳಿದ್ದೇನು ಗೊತ್ತಾ?

ಉಪ ಚುನಾವಣೆ ಫಲಿತಾಂಶ: ಬಸವರಾಜ ಬೊಮ್ಮಾಯಿ ಹೇಳಿದ್ದೇನು ಗೊತ್ತಾ?
ಹಾವೇರಿ , ಮಂಗಳವಾರ, 6 ನವೆಂಬರ್ 2018 (15:37 IST)
ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಮಾಜಿ ಸಚಿವ ಹೇಳಿಕೆ ನೀಡಿದ್ದು, ಫಲಿತಾಂಶ ನಿಯೋಜಿತವಾಗಿತ್ತು ಎಂದಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವನಲ್ಲಿ ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ಮತ್ತು ಮಂಡ್ಯ ಉಪ ಚುನಾವಣೆಯ ಫಲಿತಾಂಶ ಪೂರ್ವ ನೀಯೊಜಿತ ವಿಕ್ಟರಿಯಾಗಿದೆ. ಆದರೆ ಬಳ್ಳಾರಿ ಫಲಿತಾಂಶ ಹಣ ಅಧಿಕಾರದ ಬಲಾ ಬಲದಿಂದ ಗೆಲುವಾಗಿದೆ ಎಂದಿದ್ದಾರೆ.

 ಉಪಚುಣಾವಣೆಗಳ ಸೋಲು, ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷ  ಸ್ಥಾನಕ್ಕೆ ರಾಜೀನಾಮೆಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ನಮಗೆ ರಾಜಿನಾಮೆ ವಿಚಾರವಾಗಿ ಯಾವದೇ ಮಾಹಿತಿ ಇಲ್ಲ. ಅದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಟ್ಟ ವಿಚಾರವಾಗಿದೆ. ಆದ್ರೂ ಕೂಡಾ ನಾವು ಆತ್ಮವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗದು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಓಂಪ್ರಕಾಶ ಕಣಗಲಿ ಅಂತ್ಯಕ್ರಿಯೆ