Select Your Language

Notifications

webdunia
webdunia
webdunia
webdunia

ತೊಗರಿ ಕಾಳು ಖರೀದಿ: 14ರವರೆಗೆ ನೋಂದಣಿಗೆ ಅವಕಾಶ

ತೊಗರಿ ಕಾಳು ಖರೀದಿ: 14ರವರೆಗೆ ನೋಂದಣಿಗೆ ಅವಕಾಶ
ಕಲಬುರಗಿ , ಗುರುವಾರ, 3 ಜನವರಿ 2019 (18:31 IST)
ಬಿಸಿಲೂರು ಖ್ಯಾತಿ ಜಿಲ್ಲೆಯ ಎಲ್ಲ ರೈತರಿಂದ 2018-19 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಕಾಳು ಖರೀದಿಸಲು  ಜನವರಿ 7 ರವರೆಗೆ ನಿಗದಿಪಡಿಸಲಾದ ನೋಂದಣಿ ಕಾರ್ಯವನ್ನು ಸರ್ಕಾರದ ಆದೇಶದನ್ವಯ ನೋಂದಣಿ ಕಾರ್ಯವನ್ನು ಜನವರಿ 14 ರವರೆಗೆ ಮುಂದುವರೆಸಿ ನಿಗದಿಪಡಿಸಲಾಗಿದೆ.

ಕಲಬುರಗಿ ರೈತರು ನೊಂದಣಿಗಾಗಿ ನೀಡಬೇಕಾದ ವಿವರ ಸಿಆಸು (ಇ-ಆಡಳಿತ) ಇಲಾಖೆಯು ಸಿದ್ದಪಡಿಸಿರುವ ತಂತ್ರಾಂಶದೊಂದಿಗೆ ಭೂಮಿ, ಆಧಾರ ಕೇಂದ್ರ  ಮತ್ತು ಬೆಳೆ ದರ್ಶಕ ದತ್ತಾಂಶದಲ್ಲಿ ತಾಳೆ ಮಾಡಿ ಪರಿಶೀಲಿಸಿದ ನಂತರವೇ ರೈತರ ನೋಂದಣಿ ಮಾಡಲಾಗುತ್ತದೆ. ಒಂದು ವೇಳೆ ದತ್ತಾಂಶದಲ್ಲಿ ತೊಗರಿ ಉತ್ಪನ್ನ ಬೆಳೆಯದೇ ಇರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರು ಪರಿಶೀಲಿಸಿ ದೃಢಿಕರಿಸಿದ್ದಲ್ಲಿ ಅಂತಹ ರೈತರನ್ನು ನೊಂದಾಯಿಸಲಾಗುತ್ತದೆ.

ತೊಗರಿ ಬೆಳೆದ ರೈತರು ಪಹಣಿ ಪತ್ರಿಕೆ ಮತ್ತು ಆಧಾರ ದಾಖಲೆಗಳಲ್ಲಿ ಒಂದೇ ತರಹದ ಹೆಸರು ಇರಬೇಕಾಗುತ್ತದೆ ಹಾಗೂ ಆಧಾರ ಜೋಡಣೆಯಾದ ಬ್ಯಾಂಕ ಖಾತೆ ಹೊಂದಿರಬೇಕು. ಎಲ್ಲಾ ರೈತರು ಇದಕ್ಕೆ ಸಹಕರಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದೇನು?