ಎರಡು ಇಸ್ಪೀಟ್ ಗ್ಯಾಂಗ್ ನಡುವೆ ಗಲಾಟೆ

Webdunia
ಶನಿವಾರ, 26 ಮಾರ್ಚ್ 2022 (19:38 IST)
ಎರಡು ಇಸ್ಪೀಟ್ ಗ್ಯಾಂಗ್ ನಡುವೆ ನೆಡೆದಿದ್ದ ಗಲಾಟೆ ಪ್ರಕರಣ ಬೆನ್ನತ್ತಿದ್ದ ಸಿಸಿಬಿ ಪೊಲೀಸ್ರು  ಪ್ರಕರಣದಲ್ಲಿ ಶಾಮೀಲಾಗಿದ್ದ ಮತ್ತೊಂದು ಗ್ಯಾಂಗ್ ನ್ನ ಬಂಧಿಸಿದ್ದಾರೆ. ರಾಜಾನುಕುಂಟೆ ರೌಡಿಶೀಟರ್ ತಿಮ್ಮೇಗೌಡ ಅಲಿಯಾಸ್ ತಿಮ್ಮ ಹಾಗೂ ಆತನ ಸಹಚರರರಾದ ಹರೀಶ, ನರಸಿಂಹಮೂರ್ತಿ ,ರಾಜು ಬಂಧಿತ ಆರೋಪಿಗಳು. ಕಳೆದವಾರ ಸೋಲದೇವನಹಳ್ಳಿ ಪೊಲೀಸ್ ಸ್ಟೇ|ನ್ ವ್ಯಾಪ್ತಿಯಲ್ಲಿ ಇಸ್ಪೀಟ್ ಅಡ್ಡೆ ವಿಚಾರವಾಗಿ ಗ್ಯಾಂಗ್ ವಾರ್ ನಡೆದಿತ್ತು. ಹಾಗೆ ನಡೆದ ಗ್ಯಾಂಗ್ ವಾರ್ ನಲ್ಲಿ ಪವನ್ ಅಲಿಯಾಸ್  ಲೈಬಾ ಎಂಬಾತನ ಹೊಟ್ಟೆಗೆ ಬಿಯರ್ ಬಾಟಲ್ ನಿಂದ ಇರಿದ ನಾಲ್ಕೈದು ಮಂದಿ ಪರಾರಿಯಾಗಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಇದ್ರು ಸೋಲದೇವನಹಳ್ಳಿ ಪೊಲೀಸ್ರು ಕೈಕಟ್ಟಿ ಕುಳಿತಿದ್ರು. ಆದ್ರೆ, ಈ ವಿಷ್ಯ ಅದ್ಯೇಗೋ ಸಿಸಿಬಿ ಪೊಲೀಸ್ರ ಕಿವಿಗೆ ಬಿದ್ದಿತ್ತು. ಕೂಡ್ಲೇ ಕಾರ್ಯ ಪ್ರವೃತ್ತರಾದ ಸಿಸಿಬಿ ಪೊಲೀಸ್ರಿಗೆ ಘಟನೆಯಲ್ಲಿ ರಾಜಾನುಕುಂಟೆ ರೌಡಿಶೀಟರ್ ತಿಮ್ಮನ‌ ಕೈವಾಡವಿರಿವ ಬಗ್ಗೆ ಮಾಹಿತಿ ಸಿಕ್ಕಿತ್ತು. ಆ ಹಿನ್ನೆಲೆಯಲ್ಲಿ ಆತನ ಪತ್ತೆಗೆ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸ್ರು ತಿಮ್ಮನ ಬೆನ್ನು ಹತ್ತಿದ್ರು. ಹಾಗೆ ಬೆನ್ನತ್ತಿದ ಸಿಸಿಬಿ ಪೊಲೀಸ್ರು ಅರಕೆರೆ ಬಳಿ ತಿಮ್ಮ ಅಂಡ್ ಗ್ಯಾಂಗ್  ಮಾರಕಾಸ್ತ್ರಗಳನ್ನಿಡಿದು ದರೋಡೆಗೆ ಹೊಂಚಾಕುತ್ತಿದ್ದ ವೇಳೆ ದಾಳಿ ಮಾಡಿ ಬಂಧಿಸಿದ್ದಾರೆ. 
ಇನ್ನೂ ರೌಡಿ ತಿಮ್ಮ ಕೂಡ ನಗರದ ಹೊರವಲಯದಲ್ಲಿ ಇಸ್ಪೀಟ್ ಅಡ್ಡೆ ನಡೆಸ್ತಿದ್ದು, ಇದೇ ವಿಚಾರಕ್ಕೆ ಗಲಾಟೆ ಮಾಡಿಸಿದ್ದ ಎಂಬುದಾಗಿ ಪೊಲೀಸ್ರ ವಿಚಾರಣೆ ವೇಳೆ ತಿಳಿದು ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ನೇಹಮಯಿ ಕೃಷ್ಣಗೆ ನಕಲಿ ಆಡಿಯೋ ನೀಡಿದ್ದ ವ್ಯಕ್ತಿಗೆ ಬಂಧನ ಭಾಗ್ಯ

23 ಗಂಟೆಗಳ ವಿಚಾರಣೆಗೆ ಒಳಪಡಿಸುತ್ತಿದ್ದ ಹಾಗೇ ಶಾಲಿನಿ ರಜನೀಶ್ ವಿರುದ್ಧ ಉಲ್ಟಾ ಹೊಡೆದ ಸ್ನೇಹಮಯಿ ಕೃಷ್ಣ

ಸಿಎಂ ಕುರ್ಚಿಗಾಗಿ ಹೆಚ್ಚಿದ ಗುದ್ದಾಟ: ಕುತೂಹಲ ಮೂಡಿಸಿದ ಡಿಸಿಎಂ ಆಪ್ತ ಶಾಸಕನ ಹೇಳಿಕೆ

ಮುಂದಿನ ತಿಂಗಳೊಳಗೆ ದೇಶದಲ್ಲಿ ನಕ್ಸಲಿಸಂ ಅಂತ್ಯ; ಅಮಿತ್‌ ಶಾ

ಪಾಕ್ ಮಸೀದಿ ಸ್ಫೋಟಕ್ಕೆ 'ಸೇಡು ತೀರಿಸಿಕೊಳ್ಳಲು' ಎಲ್‌ಇಟಿ ದಾಳಿಗೆ ಸಂಚು

ಮುಂದಿನ ಸುದ್ದಿ
Show comments