Select Your Language

Notifications

webdunia
webdunia
webdunia
webdunia

ಬಸ್‌ ಅಪಘಾತ: 15 ಮಂದಿಗೆ ಗಾಯ

Bus accident
bangalore , ಬುಧವಾರ, 25 ಜನವರಿ 2023 (18:44 IST)
ಮಹದೇಶ್ವರ ಬೆಟ್ಟದ ಪಾಲಾರ್ ಬಳಿ ಖಾಸಗಿ ಪ್ರವಾಸಿ ಬಸ್ ಉರುಳಿ ಬಿದ್ದು15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ತಮಿಳುನಾಡು ಪ್ರವಾಸ ಮುಗಿಸಿ ಮಹದೇಶ್ವರ ಬೆಟ್ಟಕ್ಜೆ ಬರುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಗಿದೆ. ಗುಜರಾತ್‌ನಿಂದ ಆಗಮಿಸಿದ್ದ ಪ್ರವಾಸಿ ಬಸ್‌ ಇಂದು ಬೆಳಗ್ಗೆ ತಮಿಳುನಾಡಿನಿಂದ ಮಹದೇಶ್ವರ ಬೆಟ್ಟಕ್ಕೆ ಬರುತ್ತಿತ್ತು. ಈ ವೇಳೆ ಬಸ್‌ ಅನ್ನು ತಿರುವಿನಲ್ಲಿ ತಿರುಗಿಸುವಾಗ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಗುಂಡಿಗೆ ಬಿದ್ದು, ನಂತರ ಬೆಟ್ಟದತ್ತ ನುಗ್ಗಿದೆ. ಈ ವೇಳೆ ಬಸ್‌ ವಾಲಿಕೊಂಡು ಬಿದ್ದಿದ್ದು, ಬಸ್‌ನಲ್ಲಿದ್ದ 15 ಮಂದಿಗೆ ಗಾಯಗಳಾಗಿವೆ. ಇನ್ನು ಬಸ್‌ನಲ್ಲಿ ಸುಮಾರು 50 ಪ್ರವಾಸಿಗರು ಪ್ರಯಾಣ ಮಾಡುತ್ತಿದ್ದರು. ಪಾಲಾರ್ ರಸ್ತೆಯ ಎರಡನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ. ಗಾಯಾಳುಗಳಿಗೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ನೀರಿಗಾಗಿ ಕಾನೂನು ಹೋರಾಟ