Publish Date: Sun, 06 May 2018 (07:16 IST)
Updated Date: Sun, 06 May 2018 (07:18 IST)
ಮಂಗಳೂರು: ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ ನೀಡಿದ ವೇಳೆ ಸಜೀವ ಗುಂಡುಗಳು ಪತ್ತೆಯಾಗಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಮಂಗಳೂರು ಏರ್ ಪೋರ್ಟ್ ನಲ್ಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಇಸ್ಮಾಯಿಲ್ ಎಂಬ ವ್ಯಕ್ತಿ ಬ್ಯಾಗ್ ತಪಾಸಣೆ ವೇಳೆ ಸಜೀವ ಗುಂಡುಗಳು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಇಸ್ಮಾಯಿಲ್ ರನ್ನು ವಿಚಾರಣೆಗೊಳಪಡಿಸಲಾಯಿತು.
ಈ ಸಂದರ್ಭದಲ್ಲಿ ಅವರು ಲೈಸೆನ್ಸ್ ವೆಪನ್ ಹೊಂದಿರುವುದು ತಿಳಿಯಿತು. ತಮ್ಮ ಬಳಿಯಿರುವ ಪಿಸ್ತೂಲ್ ನನ್ನು ಈಗಾಗಲೇ ಠಾಣೆಗೆ ಸರೆಂಡರ್ ಮಾಡಿರುವುದಾಗಿ ಇಸ್ಮಾಯಿಲ್ ತಿಳಿಸಿದರು. ಪರವಾನಗಿ ಹೊಂದಿದ 0.32 ಪಿಸ್ತೂಲ್ ನ 15 ಬುಲೆಟ್ ಗಳು ಬ್ಯಾಗ್ ನಲ್ಲಿ ಪತ್ತೆಯಾಗಿತ್ತು. ಮರೆತು ಹೋಗಿ ಈ ಗುಂಡುಗಳನ್ನು ಬ್ಯಾಗ್ ನಲ್ಲೇ ಇಟ್ಟಿದ್ದೆ ಎಂದು ನಂತರ ಇಸ್ಮಾಯಿಲ್ ಮನವರಿಕೆ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.