Select Your Language

Notifications

webdunia
webdunia
webdunia
webdunia

ಬಿಎಸ್ ವೈ ಕಾಂಗ್ರೆಸ್ ಗೆ ಸೇರ್ಪಡೆಯಾದರೆ ಸಿಎಂ ಆಗಲು ಸಹಾಯ ಮಾಡುತ್ತೇನೆ- ಎಂ.ಬಿ. ಪಾಟೀಲ್ ತಿರುಗೇಟು

ಬಿಎಸ್ ವೈ ಕಾಂಗ್ರೆಸ್ ಗೆ ಸೇರ್ಪಡೆಯಾದರೆ ಸಿಎಂ ಆಗಲು ಸಹಾಯ ಮಾಡುತ್ತೇನೆ- ಎಂ.ಬಿ. ಪಾಟೀಲ್ ತಿರುಗೇಟು
ಬೆಂಗಳೂರು , ಗುರುವಾರ, 6 ಜೂನ್ 2019 (10:56 IST)
ಬೆಂಗಳೂರು : ಗೃಹ ಸಚಿವ ಎಂ.ಬಿ. ಪಾಟೀಲ್,  ಬಿ.ಎಸ್.​ ಯಡಿಯೂರಪ್ಪ ಸಿಎಂ ಆಗಲು ಸಹಾಯ ಮಾಡಲಿ ಎಂಬ ಸಿಟಿ ರವಿ ಹೇಳಿಕೆಗೆ ಇದೀಗ ಗೃಹ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ.




ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಿ ತಾವೇ ಸರ್ಕಾರ ರಚಿಸಲು ಬಿಜೆಪಿ ಸಾಕಷ್ಟು ಕಸರತ್ತು ನಡೆಸುತ್ತಿದ್ದು, ಈ ನಡುವೆ ಬಿಜೆಪಿ ಮುಖಂಡ ಸಿ.ಟಿ. ರವಿ "ಗೃಹ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಲಿಂಗಾಯಿತರ ಪರ ಕಾಳಜಿ ಇದ್ದರೆ ಬಿ.ಎಸ್.​ ಯಡಿಯೂರಪ್ಪ ಸಿಎಂ ಆಗಲು ಸಹಾಯ ಮಾಡಲಿ" ಎಂದು ಹೇಳಿಕೆ ನೀಡಿದ್ದರು.


ಇದಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ್ ,  "ಬಿ. ಎಸ್. ಯಡ್ಯೂರಪ್ಪ ಒಂದು ಪಕ್ಷದಲ್ಲಿ ನಾನೊಂದು ಪಕ್ಷದಲ್ಲಿದ್ದರೆ, ಅವರು ಸಿಎಂ ಆಗಲು ನಾನು ಹೇಗೆ ಸಹಾಯ ಮಾಡಲು ಸಾಧ್ಯ? ಹೀಗಾಗಿ ಯಡಿಯೂರಪ್ಪ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲು ನಾನು ಖಂಡಿತ ಸಹಾಯ ಮಾಡುತ್ತೇನೆ" ಎಂದು ತಿರುಗೇಟು ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅತೃಪ್ತರ ಮುಂದೆ ದುರ್ಬಲವಾಯ್ತಾ ಕಾಂಗ್ರೆಸ್?