Select Your Language

Notifications

webdunia
webdunia
webdunia
webdunia

ಮತ್ತೆ ಸಿಎಂ ಸಿದ್ದರಾಮಯ್ಯ -ಬಿಎಸ್ ವೈ ಟ್ವಿಟರ್ ವಾರ್

webdunia
ಬೆಂಗಳೂರು , ಶುಕ್ರವಾರ, 13 ಏಪ್ರಿಲ್ 2018 (09:06 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತೆ ಟ್ವಿಟರ್ ನಲ್ಲಿ ಏಟಿಗೆ ಎದಿರೇಟು ಕೊಟ್ಟುಕೊಂಡಿದ್ದಾರೆ.

ಮೊದಲು ಟ್ವೀಟ್ ಮಾಡಿದ್ದ ಬಿಎಸ್ ವೈ ಸಿದ್ದರಾಮಯ್ಯ ಸರ್ಕಾರ ಎಲ್ಲಾ ವಿಧದಲ್ಲೂ ವಿಫಲವಾಗಿದೆ ಎಂದು ಟೀಕಿಸಿದ್ದರು. ಇದಕ್ಕೆ ಸರಣಿ ಟ್ವೀಟ್ ಮಾಡಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ರಾಜ್ಯವನ್ನು ಅತೀ ಭ್ರಷ್ಟ ರಾಜ್ಯವಾಗಿ ಮಾಡಿದ ವ್ಯಕ್ತಿಯಿಂದ ದೊಡ್ಡ ಮಾತುಗಳೇ ಬರುತ್ತಿವೆ. ಬೆಂಗಳೂರನ್ನು ಕಸದ ತೊಟ್ಟಿ ಮಾಡಿದರು, ರೈತರ ಮೇಲೆ ಗೋಲಿಬಾರ್ ನಡೆಸಿದರು. ಇಂತಹ ತಲೆಬುಡವಿಲ್ಲದ ಆರೋಪಗಳಲ್ಲದೆ ನಿಮ್ಮ ಬಳಿ 6.5 ಕೋಟಿ ಕನ್ನಡಿಗರಿಗೆ ಭರವಸೆ ಸಿಗುವಂತಹ ಇನ್ನೇನು ಮಾತಿದೆ?’ ಎಂದು ಸಿಎಂ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲ ನಂತರ ಸರಣಿ ಟ್ವೀಟ್ ಮಾಡಿ ತಮ್ಮ ಸರ್ಕಾರದ ಸಾಧನೆಗಳನ್ನೆಲ್ಲಾ ಬರೆದುಕೊಂಡಿದ್ದಾರೆ. ಹಾಗೆಯೇ ಅಭಿವೃದ್ಧಿ ವಿಚಾರದಲ್ಲಿ ಯಾರು ಉತ್ತಮರು ಎಂಬುದನ್ನು ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋ ಬ್ಯಾಕ್ ಮೋದಿ ಎಂದ ಕಾವೇರಿ ಹೋರಾಟಗಾರರಿಗೆ ಪ್ರಧಾನಿ ಮೋದಿ ಹೇಳಿದ್ದೇನು?!