Select Your Language

Notifications

webdunia
webdunia
webdunia
webdunia

ಬಿಎಸ್ ವೈ, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ: ಅಮಿತ್ ಶಾ

amith shah
bengaluru , ಗುರುವಾರ, 2 ಸೆಪ್ಟಂಬರ್ 2021 (20:16 IST)
ಕರ್ನಾಟಕದಲ್ಲಿ ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಡಿಯೂರಪ್ಪರ ನಂತರ ಯಾರು ಬಿಜೆಪಿಯ ಪ್ರಭಾವಿ ನಾಯಕರು ಎಂಬ ಚರ್ಚೆಗೆ ತೆರೆ ಎಳೆಯುವ ಪ್ರಯತ್ನವೂ ಆಗಿದೆ. ಹೌದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಈ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಇನ್ನು 2023ರಲ್ಲಿ ಎದುರಾಗುವ ಕರ್ನಾಟಕ ವಿಧಾನಸಭಾ ಚು
ನಾವಣೆಯನ್ನು ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಿ, ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿ. ಎಸ್‌. ಯಡಿಯೂರಪ್ಪ ಸ್ವಂತ ನಿರ್ಧಾರದಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು‌. ಅವರ ನಿರ್ಣಯ ಹಾಗೂ ಪಕ್ಷದ ನಿರ್ಧಾರದಂತೆ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರ ರಾಜಕಾರಣ, ನಡವಳಿಕೆ ಮತ್ತು ವೈಯಕ್ತಿಕ ಜೀವನವೂ ಉತ್ತಮವಾಗಿದೆ. ಬೊಮ್ಮಾಯಿ ನೇತೃತ್ವದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸವಲತ್ತು ನೀಡುವಲ್ಲಿ ಬಿಜೆಪಿ ರಾಜಕೀಯ: ಹರೀಶ್ ಕುಮಾರ್