Publish Date: Mon, 30 Sep 2019 (17:42 IST)
Updated Date: Mon, 30 Sep 2019 (17:44 IST)
ಬಿ.ಎಸ್.ಯಡಿಯೂರಪ್ಪ ನನ್ನ ಪರಮ ಶತ್ರು. ಹೀಗಂತ ಮಾಜಿ ಶಾಸಕರೊಬ್ಬರು ಕಿಡಿಕಾರಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ದಾರಿ ಸರಿನೋ ತಪ್ಪೋ ಬೇರೆ ವಿಚಾರ. ಆದ್ರೆ ದಕ್ಷಿಣದಲ್ಲಿ ಬಿಜೆಪಿ ಬರ್ಬೇಕಾದ್ರೆ ಯಡಿಯೂರಪ್ಪ ಕಾರಣ. ಬಿಜೆಪಿಯಲ್ಲಿ ಮುಖ್ಯಮಂತ್ರಿಗಳಾಗಿದ್ದು, ಎಂಎಲ್ ಎ, ಎಂಪಿಗಳಾಗಿದ್ದು ನೂರಕ್ಕೆ ನೂರು ಯಡಿಯೂರಪ್ಪ ನಿಂದ.
ಬಿಜೆಪಿಯಲ್ಲಿರುವ ಎಲ್ಲಾ ಮಂತ್ರಿಗಳು, ಹಳೇ ಮುಖ್ಯ ಮಂತ್ರಿಗಳು, ಕೇಂದ್ರದ ಮಂತ್ರಿಗಳು ಎಲ್ಲರೂ ಯಡಿಯೂರಪ್ಪರ ಹೆಸರನ್ನ ಹೇಳುತ್ತಿದ್ರು. ನಾನು ಯಡಿಯೂರಪ್ಪನ ಪರ ಇಲ್ಲ, ಆದ್ರೆ ವಸ್ತುಸ್ಥಿತಿ ಬಗ್ಗೆ ಮಾತನಾಡುತಿದ್ದೇನೆ.
ನನ್ನ ವಿರುದ್ಧ ಸೋಲಿಸೋಕೆ 10 ವರ್ಷ ಕ್ಯಾಂಡಿಡೇಟ್ ಹಾಕಿದ್ರು. ಹೀಗಂತ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.