ಮೈಸೂರಿನಲ್ಲಿ ಏ.14ರವರೆಗೆ ಬೇಕರಿ ವ್ಯಾಪಾರಕ್ಕೆ ಬ್ರೇಕ್- ಸಚಿವ ವಿ.ಸೋಮಣ್ಣ ಸೂಚನೆ

ಶುಕ್ರವಾರ, 3 ಏಪ್ರಿಲ್ 2020 (10:14 IST)
ಮೈಸೂರು : ಮೈಸೂರಿನಲ್ಲಿ ಏ.14ರವರೆಗೆ ಬೇಕರಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಸಚಿವ ಸೋಮಣ್ಣ ಸೂಚನೆ ನೀಡಿದ್ದಾರೆ.


ಮೈಸೂರು ಪಾಲಿಕೆ ಆದೇಶಕ್ಕೆ ಬ್ರೇಕ್ ಹಾಕಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೈಸೂರಿನಲ್ಲಿ ಏ.14ರವರೆಗೆ ಬೇಕರಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಸೂಚಿಸಿದ್ದಾರೆ.


ಹಾಗೇ ಬ್ರೆಡ್, ಬನ್, ಇತರ ತಿನಿಸು ತಯಾರಿಸಬಹುದು. ದಿನಸಿ ಅಂಗಡಿ ಸೂಪರ್ ಮಾರ್ಕೆಟ್, ಕೆಎಂಎಫ್ ಔಟ್ ಲೆಟ್, ಡೇರಿ ಔಟ್ ಲೆಟ್ ಗಳಿಗೆ ಮಾರಾಟ ಮಾಡಲು ಅವಕಾಶ ನೀಡುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಧಾನಿ ಮೋದಿ ಪ್ರಕಾರ ಕೊರೊನಾ ತಡೆಗೆ ಇದೇ ರಾಮಬಾಣವಂತೆ